ಆರಿ್ಬ.ವೈ.ಎಂ.ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ 101 ವಿದ್ಯಾರ್ಥಿಗಳಿಂದ ರಕ್ತದಾನ; ಸಮಾಜ ಸೇವೆಗೆ ಯುವಜನರ ಕೈಜೋಡಣಿ
ಬಳ್ಳಾರಿ 23: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯ (ಆರಿ್ಬ.ವೈ.ಎಂ.ಇ.ಸಿ) ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಜಿಲ್ಲಾ ಆರೋಗ್ಯ ಸಮಾಜ ಕಲ್ಯಾಣ ಘಟಕ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಎನ್‌ಎಸ್‌ಎಸ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐಆರ್ಸಿಎಸ್) ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಿತು. ಕಾರ್ಯಕ್ರಮಕ್ಕೆ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಟಿ. ಗಂಗಾಧರಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನವು ಮಾನವೀಯ ಸೇವೆಯ ಶ್ರೇಷ್ಠ ಕಾರ್ಯವಾಗಿದ್ದು, ಯುವಜನರು ಸಮಾಜದ ಒಳಿತಿಗಾಗಿ ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೀ.ವಿ. ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹೇಂತೇಶ, ಉಪಾಧ್ಯಕ್ಷರು ಹಾಗೂ ಆರ್.ವೈ.ಎಂ.ಇ.ಸಿ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ, ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಸಹಾಯಕ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಭುಸ್ವಾಮಿ ಎಸ್.ಎಂ., ಬಾಡದ ಪ್ರಕಾಶ್, ಪ್ರಾಚಾರ್ಯ ಡಾ. ಎಚ್. ಮಹಾಬಲೇಶ್ವರ, ಉಪಪ್ರಾಚಾರ್ಯ ಡಾ. ಸವಿತಾ ಸೋನೋಳಿ, ವೀ.ವಿ. ಸಂಘದ ಎಂ.ಸಿ ಸದಸ್ಯರಾದ ಹಚ್ಚೊಳ್ಳಿ ಶರಣಪ್ಪ ಹಾಗೂ ಮುಂಡಾಸದ ಮಲ್ಲಿಕಾರ್ಜುನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆರ್.ವೈ.ಎಂ.ಇ.ಸಿ ಡೀನ್ಗಳಾದ ಡಾ. ಹನುಮಂತರೆಡ್ಡಿ, ಡಾ. ಕೋರಿ ನಾಗರಾಜ್ ಹಾಗೂ ಡಾ. ದೊಡ್ಡಬಸವನಗೌಡ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ನರಸಿಂಹಮೂರ್ತಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನದ ಮಹತ್ವ ಕುರಿತು ಮಾಹಿತಿ ನೀಡಿದರು.
ಎನ್‌ಎಸ್‌ಎಸ್ ತಂಡದ ಸದಸ್ಯರಾದ ಡಾ. ವಿರೂಪಾಕ್ಷಗೌಡ ಎಚ್., ಪ್ರೊ. ಸುರೇಶ್ ಕೆ., ಡಾ. ಸೋಮನಾಥ ಸ್ವಾಮಿ ಆರ್.ಎಚ್.ಎಂ., ಪ್ರೊ. ಎನ್. ಸ್ವಾಮಿ ಹಾಗೂ ಪ್ರೊ. ಎಚ್.ಎಂ. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಸುಮಾರು 101 ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮಾನವೀಯ ಮೌಲ್ಯಗಳನ್ನು ಮೆರೆದರು. ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.