ಉತ್ಸವ ರಾಕ್‌ಗಾರ್ಡನ್‌ಗೆ ಸಚಿವ ಶಿವರಾಜ ತಂಗಡಗಿ ಭೇಟಿ
ಶಿಗ್ಗಾವಿ 22: ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯ ಮಹತ್ವ ಅರಿಯಬೇಕಾದರೆ ಒಮ್ಮೆ ಉತ್ಸವ ರಾಕ್‌ಗಾರ್ಡನ್‌ಗೆ ಭೇಟಿ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಗೊಟಗೋಡಿಯ ರಾಕ್‌ಗಾರ್ಡನ್‌ಗೆ ಸೋಮವಾರ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಓಪಚಾರಿಕವಾಗಿ ಮಾತನಾಡಿದ ಅವರು ಕನ್ನಡ ನಾಡು,ನುಡಿ ಸಂಸ್ಕೃತಿ, ಗ್ರಾಮೀಣ ಆಟೋಟಗಳು ಹಾಗೂ ಗ್ರಾಮೀಣ ಸಾಮ್ರಾಜ್ಯವನ್ನು ಶಿಲ್ಪಗಳ ಮೂಲಕ ಬಿಂಬಿಸಿರುವ ಕಲಾವಿದರ ಶ್ರಮ ಪ್ರಶಂಸನೀಯ ಎಂದು ಸಚಿವರು ನುಡಿದರು.
ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶ್ವನಾಥ ಹಿರೇಮಠ, ಹಾವೇರಿಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ, ಶಿಗ್ಗಾಂವ ತಹಸೀಲ್ದಾರ್ ಸಂತೋಷ ಹಿರೇಮಠ, ದಾಸನೂರ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶದಾಸನೂರ ಮತ್ತಿತರರು ಸಚಿವರೊಂದಿಗಿದ್ದರು. ಗಾರ್ಡನ್ ಕ್ಯೂರೇಟರ್ ವೇದಾರಾಣಿದಾಸನೂರ ಅವರು ಸಚಿವರು ಹಾಗೂ ಅಧಿಕಾರಿಗಳನ್ನು ಬರಮಾಡಿಕೊಂಡರು. ಗಾರ್ಡನ್‌ನ ರಾಜ್‌ಕುಮಾರ್ ಸರ್ಕಲ್, ಮದುವೆ ಪ್ರದರ್ಶನಾಲಯ, ದನಗಳ ಸಂತೆ, ವಾರದ ಸಂತೆ,ಕುಸ್ತಿ ಮತ್ತಿತರ ಗ್ಯಾಲರಿಗಳನ್ನು ಸಚಿವರು, ಅಧಿಕಾರಿಗಳು ವೀಕ್ಷಿಸಿ ಅಪಾರಮೆಚ್ಚುಗೆ ವ್ಯಕ್ತಪಡಿಸಿದರು. ಉತ್ಸವ ರಾಕ್‌ಗಾರ್ಡನ್ ಸಮಿತಿ ವತಿಯಿಂದ ಸಚಿವ ಶಿವರಾಜ ತಂಗಡಗಿ ಅವರನ್ನು ಗೌರವಿಸಲಾಯಿತು.