ಶಿಗ್ಗಾವ್

ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಗೆ ಭೇಟಿ

ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಗೆ ಭೇಟಿ

ಲೋಕದರ್ಶನ ವರದಿ

ಶಿಗ್ಗಾವಿ 05: ರೈತ ಉತ್ಪಾದಕ ಕಂಪನಿಯ ಅಭಿವೃದ್ಧಿ ಹಾಗೂ ಸುಧಾರಿತ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ರಾಜ್ಯ ಕೃಷಿ ಇಲಾಖೆಯ ನಿರ್ದೇಶಕಿ ಸಿ. ಎನ್. ನಂದಿನಿಕುಮಾರಿ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಗೆ ಭೇಟಿ ನೀಡಿಕೃಷಿಯ ಉತ್ಪನ್ನಗಳನ್ನು ಪರಿಶೀಲಿಸಿ ನಂತರ ಮಾತನಾಡಿದ ಅವರು ಇಲಾಖೆಯ ಸಹಕಾರಯಾವಾಗಲೂ ರೈತ ಉತ್ಪಾದಕ ಕಂಪನಿಗಳಿಗೆ ಇದೇ ಅದರ ಸದುಪಯೋಗ ಪಡೆದುಕೊಳ್ಳಲು ರೈತಾಪಿ ವರ್ಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.

 ಈ ಸಂದರ್ಭದಲ್ಲಿ ಜಿಲ್ಲೆಯ ಕೃಷಿಜಂಟಿ ನಿರ್ದೇಶಕ ಮಂಜುನಾಥ, ಶಿಗ್ಗಾವಿ ಸಹಾಯಕ ನಿರ್ದೇಶಕ ಸುರೇಂದ್ರ ದಿಕ್ಷಿತ ಹಾಗೂ ಕೃಷಿ ಆಧಿಕಾರಿಗಳಾದ ಅರುಣಕುಮಾರ ಕ್ಯಾಲಕೊಂಡ, ಶಿವಕುಮಾರ, ಆತ್ಮಯೋಜನೆಯ ಅಧಿಕಾರಿಗಳಾದ ವನರಾಜ ಬಣಕಾರ, ರಾಜು ಜಂಗ್ಲೆಪ್ಪನವರ ಹಾಗೂ  ಸಂಸ್ಥೆಯ ಅಧ್ಯಕ್ಷ ಸಂತೋಷಕಟಗಿ, ನಿರ್ದೇಶಕರಾದ ರಾಘವೇಂದ್ರ ದೇಶಪಾಂಡೆ, ಬಸವರಾಜ ಅಜ್ಜಂಪೂರ, ಜಗದೀಶ ತೋಂಡಿಹಾಳ, ಈರಪ್ಪ ಮೂಲಿಮನಿ, ಸಂತೋಷ ಹುಬ್ಬಳ್ಳಿ, ಕಂಪನಿ ಸಿ ಇ ಓ ರಾಹುಲ ಮಾಳವದೆ, ಸಂಪನ್ಮೂಲ ವ್ಯಕ್ತಿ ಅಶೋಕಗೌಡ ಪಾಟೀಲ  ಉಪಸ್ಥಿತರಿದ್ದರು 

ಸುದ್ದಿ ಓದಿ