ಸೌಂದತ್ತಿ

ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯ ನಾಮಪತ್ರ ಸಲ್ಲಿಕೆ

ಸವದತ್ತಿ 17: ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸೋಮವಾರದಂದು ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯರವರು ತಮ್ಮ ಪತ್ನಿ ಶೃತಿಯೊಂದಿಗೆ ಹಾಗೂ ಮಾಜಿ ಶಾಸಕ ಸುಭಾಸ ಕೌಜಲಗಿ, ಪಂಚಪ್ಪ ಮಲ್ಲಾಡ, ಫಕ್ರುಸಾಬ ದೊಡಮನಿಯವರೊಂದಿಗೆ ಮಿನಿ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಡಾ.ರಾಜೀವ ಕೂಲೇರವರಿಗೆ ನಾಮಪತ್ರ ಸಲ್ಲಿಸಿದರು. 

ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರ್ಮದೊಂದಿಗೆ ಮೂಹೂರ್ತದ ಪ್ರಕಾರ ಸೋಮವಾರದಂದು ನಾಮಪತ್ರ ಸಲ್ಲಿಸಿದ ವಿಶ್ವಾಸ ವೈದ್ಯರವರು ಏ.19ರಂದು ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರೊಂದಿಗೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವದಾಗಿ ಹೇಳಿದ್ದಾರೆ. 

ಕಾಂಗ್ರೆಸ್ ಮುಖಂಡರಾದ ರವೀಂದ್ರ ಯಲಿಗಾರ, ಮಹಾಬಳೇಶ್ವರ ಪುರದಗುಡಿ, ಡಿ.ಡಿ.ಟೋಪೋಜಿ, ಸಿ.ಬಿ.ಬಾಳಿ, ಶಿವಾನಂದ ಪಟ್ಟಣಶೆಟ್ಟಿ, ವಿರೇಶ ಬ್ಯಾಹಟ್ಟಿ, ಫಕ್ಕೀರ​‍್ಪ ಹದ್ದನ್ನವರ, ಚಂದ್ರು ಜಂಬ್ರಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 

ಏ.13ರಿಂದ ಇಲ್ಲಿಯವರೆಗೆ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸೋಮವಾರದಂದು ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯ ಹಾಗೂ ಪಕ್ಷೇತರರಾಗಿ ಮಲ್ಲಿಕಾರ್ಜುನ ಗಂಗಪ್ಪ ಮುದೇನೂರ ಸೇರಿದಂತೆ ಇಂದು ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಡಾ.ರಾಜೀವ ಕೂಲೇರ ತಿಳಿಸಿದ್ದಾರೆ. 


ಸುದ್ದಿ ಓದಿ