ರಾಣೆಬೆನ್ನೂರ

ಒಳಪಂಗಡ ಭಿನ್ನತೆಗಳನ್ನು ಮರೆತು ಒಂದಾಗಬೇಕು: ಶಂಕರ

ಒಳಪಂಗಡ ಭಿನ್ನತೆಗಳನ್ನು ಮರೆತು ಒಂದಾಗಬೇಕು: ಶಂಕರ
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ರಾಣೇಬೆನ್ನೂರ 18:  ಸಮಾಜದ ಬಾಂಧವರು ಎಲ್ಲ ಒಳಪಂಗಡ ಭಿನ್ನತೆಗಳನ್ನು ಮರೆತು ಒಂದಾಗಬೇಕು. ಸಮಾಜದ ಇತಿಹಾಸ ಭವ್ಯತೆಗಳನ್ನು ಅರಿತುಕೊಳ್ಳಬೇಕು ಎಂದು ತಹಶೀಲ್ದಾರ ಜಿ.ಎಸ್.ಶಂಕರ್ ಹೇಳಿದರು. 

ಅವರು ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಿಸಿ ಮಾತನಾಡಿದರು  ವಿಶ್ವಮಟ್ಟದಲ್ಲಿ ಏನೇ ಕಾರ್ಯಗಳು ನಡೆದರೂ ಅದು ವಿಶ್ವಕರ್ಮದಿಂದಲೇ ಮಾತ್ರ ದೇವತೆಗಳನ್ನು ನಿರ್ಮಾಣ ಮಾಡಿದವ ವಿಶ್ವಕರ್ಮ, ಇಡೀ ಸೃಷ್ಠಿಯ ಎಲ್ಲ ವಸ್ತುಗಳು ವಿಶ್ವಕರ್ಮ ಅವರಿಂದಲೇ ನಿರ್ಮಿತವಾಗಿವೆ ಎಂದರು.

ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ವಿಶ್ವಕರ್ಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಎಂದರೆ ಜಗತ್ತಿನ ಕರ್ತೃ, ವಿಶ್ವಕರ್ಮ ಎಂಬುದು ಸಂಸ್ಸೃತಿಯ ಪ್ರತೀಕ. ವಿಶ್ವಕರ್ಮರು ತಯಾರಿಸಿದ ವಸ್ತುಗಳನ್ನು ಪ್ರತಿ ಮನೆ ಮನೆಗಳಲ್ಲಿ ಕಾಣಬಹುದು ಎಂದರು. 

ಸಮಾಜದ ಮುಖಂಡ ಬಸವರಾಜ ಬಡಿಗೇರ ಮಾತನಾಡಿ, ಎಲ್ಲಿ ಕರ್ಮವಿದೆಯೋ ಅಲ್ಲಿ ವಿಶ್ವಕರ್ಮ ಇರುತ್ತಾನೆ. ಸೃಷ್ಠಿಯ ಎಲ್ಲಾ ಕಾರ್ಯಗಳಲ್ಲಿಯೂ ವಿಶ್ವಕರ್ಮ ಇದ್ದಾನೆ. ಮಾನವನ ಹುಟ್ಟಿನಿಂದ ಮರಣದ ವರೆಗೂ ವಿಶ್ವಕರ್ಮ ಬೇಕು.ಎಲ್ಲರಿಗೂ ವಿಶ್ವಕರ್ಮ ಅತಿ ಅವಶ್ಯಕವಾಗಿ ಬೇಕು. ವಿಶ್ವಕರ್ಮದವರಿಗೂ ಎಲ್ಲರೂ ಬೇಕು. ಹಾಗಾಗಿ ವಿಶ್ವಕರ್ಮ ಜನಾಂಗಕ್ಕೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು ದೊರೆಯುಂತಾಗಬೇಕು. ತಾಲೂಕಿನಲ್ಲಿ ಮಾತ್ರ ವಿಶ್ವಕರ್ಮ ಜಯಂತ್ಯೋತ್ಸವ ನಡೆಯುವುದರ ಬದಲು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಹಾಗೂ ಮಂಡಲದಲ್ಲಿ ಆಚರಿಸುವುವಂತಾಗಬೇಕು ಎಂದರು.

ವಿಶ್ವಕರ್ಮ ಪರಂಪರೆ ಎಂದರೆ ಕೇವಲ ಒಂದು ಜಾತಿಯ ಪರಂಪರೆಯಲ್ಲ. ಸ್ವಯಂಭೂ ವಿಶ್ವಕರ್ಮನ ಪರಂಪರೆ, ಪಂಚಬ್ರಹ್ಮರ್ಷಿಗಳ ಪರಂಪರೆ, ಪಂಚ ಶಿಲ್ಪರ್ಷಿಗಳ ಪರಂಪರೆ, ಪಂಚ ವೇದಗಳ ಪರಂಪರೆ, ಪಂಚಶಿಲ್ಪಗಳ ಪರಂಪರೆ, ಪಂಚ ಶಕ್ತಿಗಳ ಪರಂಪರೆ, ಪಂಚವಿಜ್ಞಾನಗಳ ಪರಂಪರೆ, ಇದುವೇ ವೇದ-ಶಿಲ್ಪ ಸಂಸ್ಸೃತಿಯ ವಿಶ್ವದ ಆದಿಪರಂಪರೆಯಾಗಿದೆ ಎಂದರು. 

ಭಾರತೀಯ ಸಂಸ್ಸೃತಿಯಲ್ಲಿ ದೇವಶಿಲ್ಪಿ ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಪ್ರಥಮ ವಾಸ್ತುಶಿಲ್ಪದ ಆಚಾರ್ಯನೆಂದು ಮತ್ತು ಪ್ರವರ್ತಕನೆಂದು ಗೌರವಿಸಲ್ಪಟ್ಟಿರುತ್ತದೆ. ಯಾವುದೇ ದೇವಾಲಯ, ಗೃಹ, ನಗರ, ಯಂತ್ರ, ಪ್ರಾಕಾರ, ಮೂರ್ತಿ ಶಿಲ್ಪಗಳ ನಿರ್ಮಾಣ ಕಾಲದಲ್ಲಿ ಆದಿ, ಮಧ್ಯ ಮತ್ತು ಅಂತ್ಯದಲ್ಲಿ ಪ್ರಪ್ರಥಮವಾಗಿ ವಾಸ್ತುಶಿಲ್ಪಾಧಿಪತಿ ಭಗವಾನ್ ವಿಶ್ವಕರ್ಮನ ಪೂಜೆಯನ್ನೇ ಮಾಡಬೇಕೆಂದು ಶಾಸ್ತ್ರಗಳಲ್ಲಿ ವಿವರಣೆ ಇದೆ. ಈ ಭಗವಾನ್ ವಿಶ್ವಕರ್ಮನು ಬರೀ ವಿಶ್ವಕರ್ಮರು ಪೂಜಿಸುವಂತ ದೇವನಲ್ಲ. ಜಗತ್ತಿನಲ್ಲಿ ಎಲ್ಲರೂ ಪೂಜಿಸುವಂತಹ ಪ್ರಥಮ ದೇವನಾಗಿದ್ದಾನೆ. ಭಗವಾನ್ ವಿಶ್ವಕರ್ಮನ ಪೂಜೆ ಮತ್ತು ಆರಾಧನೆ ಮಾಡುವುದರಿಂದ ಗೃಹದೋಷಗಳು ಉಂಟಾಗುವುದಿಲ್ಲ ಎಂದು ಬಡಿಗೇರ ಹೇಳಿದರು.  

ಓಂಕಾರಪ್ಪ ಅರ್ಕಾಚಾರಿ,  ರಾಘವೇಂದ್ರಕುಮಾರ, ನಾಗರಾಜ್ ಬಡಿಗೇರ, ವೀರಣ್ಣ ಅರ್ಕಾಚಾರಿ, ಶ್ರೀಧರ ಬೆಳ್ಳೂಡಿ, ಪ್ರಶಾಂತ ಬೆಳ್ಳೂಡಿ, ಚಂದ್ರು ಹುಲ್ಲತ್ತಿ, ಸಿದ್ದಣ್ಣ ಬಡಿಗೇರ, ಪರಮೇಶ್ವರಚಾರ್ ಬಡಿಗೇರ, ಹೇಮಾಚಾರ್ ಬಡಿಗೇರ, ಶಿವಾಚಾರ್ ಇಟಗಿ, ದೇವೇಂದ್ರಪ್ಪ ಹರನಗಿರಿ, ಹನುಮಂತಪ್ಪ ಕುದರಿಹಾಳ, ಗಣೇಶ ಬಡಿಗೇರ, ಮೇಡ್ಲೇರಿ ಈರಣ್ಣ ಬಡಿಗೇರ, ಮೌನಲಿಂಗ ಮಾಯಾಚಾರಿ ಮತ್ತಿತರರು ಉಪಸ್ಥಿತರಿದ್ದರು . 

ಸುದ್ದಿ ಓದಿ