ಭಾರತ, ಲಕ್ಸೆಂಬರ್ಗ್ ನಡುವೆ ನಾಳೆ ವರ್ಚುವಲ್ ಸಮಾವೇಶ
ನವದೆಹಲಿ, 18: ಪ್ರಧಾನಮಂತ್ರಿ ನರೇಂದ್ರ ಮೋದಿ, ಲಕ್ಸೆಂಬರ್ಗ್ ಪ್ರಧಾನಿ ಜೇವಿಯರ್ ಬೆಟ್ಟೆಲ್ ನಾಳೆ ವರ್ಚವಲ್
ಸಮಾವೇಶದ ಮೂಲಕ ಭೇಟಿಯಾಗಲಿದ್ದಾರೆ. ಕಳೆದ
ಎರಡು ದಶಕಗಳಲ್ಲಿ ಭಾರತ, ಲಕ್ಸೆಂಬರ್ಗ್ ದೇಶಗಳ ನಡುವೆ ನಡೆಯಲಿರುವ
ಮೊದಲ ಮುಖಾಮುಖಿ ಸಭೆ ಇದಾಗಿದೆ.
ಕೋವಿಡ್ ನಂತರ ಜಾಗತಿಕವಾಗಿ ಉದ್ಬವವಾಗಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಭಾರತ, ಲಕ್ಸೆಂಬರ್ಗ್ ದೇಶಗಳ ನಡುವಣ ಸಹಕಾರ ಬಲಪಡಿಸುವುದು ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲಾ ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ. ಪರಸ್ಪರ ಆಸಕ್ತಿಯ, ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಭಾರತ, ಲಕ್ಸೆಂಬರ್ಗ್ ನಡುವೆ ಉನ್ನತ ಮಟ್ಟದಲ್ಲಿ ಸಂಬಂಧ ಮುಂದುವರಿದಿದೆ. ಇಬ್ಬರು ಪ್ರಧಾನ ಮಂತ್ರಿಗಳು ಈ ಹಿಂದೆ ಮೂರು ಸಂದರ್ಭಗಳಲ್ಲಿ ಭೇಟಿಯಾಗಿದ್ದರು.