ರಾಣೆಬೆನ್ನೂರ

ತ್ರಿಪುರ ರಾಜ್ಯದಲ್ಲಿ ಮುಸ್ಲಿಂ ಧರ್ಮದ ಮೇಲೆ ದೌರ್ಜನ್ಯ: ನಗರದಲ್ಲಿ ಖಂಡನೆ

ತ್ರಿಪುರ ರಾಜ್ಯದಲ್ಲಿ ಮುಸ್ಲಿಂ ಧರ್ಮದ ಮೇಲೆ ದೌರ್ಜನ್ಯ: ನಗರದಲ್ಲಿ ಖಂಡನೆ


ರಾಣೇಬೆನ್ನೂರು 16:  ತ್ರಿಪುರ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹಿಂಸೆ ಹಾಗೂ ದಾಳಿ ನಡೆದಿರುವುದನ್ನು ಖಂಡಿಸಿದ ನಗರದ ಮುಸ್ಲಿಂ ಸಮುದಾಯದ ಬಾಂದವರು ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇಲ್ಲಿನ ಜನತಾ ಬಜಾರ್ ಬಳಿಯ ದರ್ಗಾ ವೃತ್ತದಿಂದ ಭಾರಿ ಜನ ಸಮುದಾಯದೂಂದಿಗೆ ಪ್ರಾರಂಭವಾದ ಪ್ರತಿಭಟನಾ ಮೇರವಣಿಗೆಯೂ ಎಂ.ಜಿ. ರಸ್ತೆ ಮೂಲಕ ಸಾಗಿ ಮೇಡ್ಲೇರಿ ರಸ್ತೆಯಲ್ಲಿರುವ ಅಂಜುಮನ್ ಮೈದಾನಕ್ಕೆ ತೆರಳಿತು.  

ನಂತರ ನಡೆದ ಸಮಾರಂಭದಲ್ಲಿ ಅಖಿಲ ಕರ್ನಾಟಕ ಸುನ್ನಿ ಉಲಾಮ್ ಬೋರ್ಡ್‌ ಸಹಕಾರ್ಯದರ್ಶಿ ಮೌಲಾನಾ ಖಾಜಿ ಮುಸ್ತಾಕ್ ಅಹ್ಮದ್ ರಜ್ವಿ ಮಾತನಾಡಿ ತ್ರಿಪುರ ರಾಜ್ಯದಲ್ಲಿ ವಿ.ಹೆಚ್‌.ಪಿ ಸಂಘಟನೆಯ ಕಾರ್ಯಕರ್ತರು ಪ್ರವಾದಿ ಮಹಮ್ಮದ್ ಪೈಗಂಬರ ಅವರ ಬಗ್ಗೆ ಅವಹೇಳನಕಾರಿ ಘೋಷಣೆ ಕೋಗಿದ್ದಾರೆ, ತ್ರಿಪುರಾದಲ್ಲಿ ಅಲ್ಲದೇ ರಾಜ್ಯದ 16 ಮಸೀದಿಗಳನ್ನು ಸುಟ್ಟು 3 ಮಸೀದಿಯನ್ನು ಕೆಡವಲಾಗಿದೆ ಅಲ್ಲದೇ ಮದರಸಾ ಮತ್ತು ಮಸೀದಿಗಳಲ್ಲಿದ್ದ ಇಸ್ಲಾಂ ಧರ್ಮದ ಖುರಾನ್ ಗ್ರಂಥಗಳನ್ನು ಸುಟ್ಟು ಹಾಕಲಾಗಿದೆ.  ಎಂದು ತಮ್ಮ ಆಕ್ರೋಷ ವ್ಯಕ್ತ ಪಡಿಸಿದರು.  

ಈ ಘಟನೆ ಬಗ್ಗೆ ದೆಹಲಿಯ ವಿದ್ವಾಂಸರು, ವಕೀಲರು ತತ್ವಜ್ಞಾನಿಗಳು ಮಾಹಿತಿ ಕೇಳಲು ತ್ರಿಪುರಾ ರಾಜ್ಯಕ್ಕೆ ತೆರಳಿದರೆ ಅಲ್ಲಿನ ಸರ್ಕಾರ ಅವರನ್ನು ಬಂದಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂತಹ ಹೀನ ಕೃತ್ಯಗಳಿಂದ ಇಡೀ ತ್ರಿಪುರ ರಾಜ್ಯದ ಮುಸ್ಲಿಂ ಸಮುದಾಯವು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೊಡಲೇ ತಪ್ಪಿತಸ್ತರ ವಿರುದ್ದ ಕೇಂದ್ರ ಸರ್ಕಾರ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಇತ್ತಾಯಿಸಿದ ಅವರು ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ತಮ್ಮ ಮನವಿ ಸಲ್ಲಿಸಿ ಆಗ್ರಹಿಸಿದರು.  

ಮುಂಚೋಣಿಯಲ್ಲಿ ಮೌಲಾನಾ ಇಬ್ರಾಹೀಂ ಸಖಾಫಿ, ನಗರಸಭಾ ಸದಸ್ಯ ನೂರುಲ್ಲಾ ಖಾಜಿ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ಅಬ್ದುಲ್ ವಹಾಬ್ ಶಾಪಿ, ಅಹ್ಮದ್ ಕಿಲೇದಾರ, ನೂರುಲ್ಲಾ ಜೋಕಾಲಿ, ಮೊಹಮ್ಮದ್ ಜವಳಿ, ಅಜರುದ್ದಿನ್ ಭಾವಿಕಟ್ಟಿ ಸೇರಿದಂತೆ ಸಮಾಜದ ನೂರಾರು ಮುಖಂಡರು, ಯುವಕರು, ಸಾವಿರಾರು ನಾಗರೀಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ