ಶಿಗ್ಗಾವ್

ವಿನಯ ಕುಲಕರ್ಣಿರವರ ಕಚೇರಿ ಪೂಜಾ ಪ್ರಾರಂಭೋತ್ಸವ ಕಾರ್ಯಕ್ರಮ

ವಿನಯ ಕುಲಕರ್ಣಿರವರ ಕಚೇರಿ ಪೂಜಾ ಪ್ರಾರಂಭೋತ್ಸವ ಕಾರ್ಯಕ್ರಮ

ಶಿಗ್ಗಾವಿ 17: ಬೆಂಗಳೂರಿನ ಶಾಸಕರ ಭವನದಲ್ಲಿ ಧಾರವಾಡ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿನಯ ಕುಲಕರ್ಣಿ ಅವರ ಕಚೇರಿ ಪೂಜಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ತದನಂತರ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಧ್ಯಕ್ಷ ಸಲೀಂ ಅಹಮದ್ ಅವರನ್ನು ಭೇಟಿ ಮಾಡಿ ಶಿಗ್ಗಾವಿ ಮತಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಮತ್ತು ನಿಗಮ ಮಂಡಳಿಗಳ ನೇಮಕದಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಗಣಿಸುವಂತೆ ಶಿಗ್ಗಾವಿ ತಾಲೂಕಿನ ಪಕ್ಷದ ವಕ್ತಾರ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿಕೊಂಡರು. 

ಧಾರವಾಡ ಮತಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಯುವಕರಕಣ್ಮಣಿ ರೈತ ಬಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬೆಂಗಳೂರಿನ ಶಾಸಕರ ಭವನದಲ್ಲಿ ಸಾರ್ವಜನಿಕ ಸಂಪರ್ಕ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ, ತಾಲೂಕಿನ ಯುವ ಮುಖಂಡ ಬಸನಗೌಡ ಪಾಟೀಲ್, ಪಕ್ಷದ ಹಿರಿಯ ಮುಖಂಡ ಮಹೇಶ್ ತಳವಾರ್, ಸುರೇಶ್ ಹುಲಗೂರು, ತಿಪ್ಪಣ್ಣ ದಳವಾಯಿ ಇನ್ನು ಹಲವಾರು ಭಾಗಿಯಾಗಿ ಶುಭಕೋರಿದರು. 

ತದನಂತರ ಶಿಗ್ಗಾವ್ ಮತಕ್ಷೇತ್ರಕ್ಕೆ ಎರಡು ಬಾರಿ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದು ಕಾರ್ಯಕರ್ತರ ನಾಡಿಮಿಡಿತ ನಿಮಗೆ ತಿಳಿದಿದ್ದು ಜೊತೆಗೆ ಸ್ಥಳೀಯವಾಗಿ ಯಾಶೀರ್ ಖಾನ್ ಪಠಣ ಹಾಗೂ  ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಗೌರವಿತವಾಗಿ ಕಾಣುತ್ತಿದ್ದು ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವಿದ್ದು ಪ್ರಮುಖವಾಗಿ ಶಿಗ್ಗಾವಿ ಮತಕ್ಷೇತ್ರದ ನಿಷ್ಠಾವಂತ ಹಾಗೂ ಹೋರಾಟಗಾರ ಕಾರ್ಯಕರ್ತರನ್ನು ಗುರುತಿಸಿ ಪಕ್ಷದ ಸಂಘಟನೆಗಾಗಿ ಪಕ್ಷದಲ್ಲಿಯೂ ತಾಲೂಕು ಜಿಲ್ಲೆ ಹಾಗೂ ರಾಜ್ಯಮಟ್ಟದ ಹುದ್ದೆಗಳನ್ನು ಜೊತೆಗೆ ನಿಗಮ ಮಂಡಳಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೆ ನೇಮಕ ಮಾಡುವ ಕೆಲಸ ಮಾಡಿಕಾರ್ಯಕರ್ತರಿಗೆ ಶಕ್ತಿ ತುಂಬುವಂತೆ ಮನವಿ ಮಾಡಿಕೊಳ್ಳಲಾಯಿತು. ಕೆಪಿಸಿಸಿ ಕಛೇರಿಯಲ್ಲಿ  ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್‌ಅವರನ್ನು ಭೇಟಿ ಮಾಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಶಕ್ತಿ ತುಂಬ ಕೆಲಸ ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಬ್ಬರು ನಾಯಕರುಗಳು ಬರುವ ಕೆಲವು ದಿನಗಳಲ್ಲಿ ನಾಮ ನಿರ್ದೇಶನ ಪಕ್ಷ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಆ ಸಂದರ್ಭದಲ್ಲಿ ಪಕ್ಷಕ್ಕಾಗಿದುಡಿದ ನಿಮ್ಮಂತವರನ್ನು ಗುರುತಿಸಿ ಅವಕಾಶ ಮಾಡಿಕೊಡಲಾಗುವುದುಎಂದು ತಿಳಿಸಿದ್ದಾರೆ. 


ಸುದ್ದಿ ಓದಿ