ಗ್ರಾಮಸ್ಥರು ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡದೇ ಜಾಗೃತಿವಹಿಸಿ: ವಿಶ್ವನಾಥ
ಶಿಗ್ಗಾವಿ 03 : ತಾಲೂಕಿನ ಕುಂದೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಎಸ್ ಡಿ ಎಮ್ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಭಾರತೀಯ ಜನತಾ ಪಕ್ಷ ಶಿಗ್ಗಾವಿ ಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಕ್ಫಿ. ಲತಾ ಕರ್ಬಿ ಅವರ ತಂಡದ ಸದಸ್ಯರು ದಿಽಽ ಮಹಾತ್ಮ ಗಾಂಧಿ ಹಾಗೂ ದಿ ಲಾಲಬಹದ್ದೂರ ಶಾಸ್ತ್ರೀಯ ಜಯಂತಿ ನಿಮಿತ್ತ ಹಾಗೂ ನರೇಂದ್ರ ಮೋದಿಯವರ 74 ಜನ್ಮ ದಿನದ ಪ್ರಯುಕ್ತ ಉಚಿತ ಹೃದಯ ಆರೋಗ್ಯ ತಪಾಸಣೆ ಶಿಬಿರವನ್ನು ಶಿವಯೋಗಿಸ್ವಾಮಿ ಹಿರೆಮಠ ಇವರ ದಿವ್ಯ ಸಾನಿಧ್ಯವಹಿಸಿದ್ದರು.
ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸಬೇಕಾದ ಅನಿವಾರ್ಯತೆ ಬಂದೊಂದಗಿದೆ ಆದ್ದರಿಂದ ಗ್ರಾಮಸ್ಥರು ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡದೇ ಜಾಗೃತಿವಹಿಸಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸುಭಾಸ ಚವ್ಹಾಣ, ರೇಣಕನಗೌಡ ಪಾಟೀಲ ಸೋಮಶೇಖರಯ್ಯ ಗೌರಿಮಠ, ಶಿವು ಬುದ್ದಪ್ಪನವರ, ಶಂಭಣ್ಣ ಕಡಕೋಳ, ನಾಗಪ್ಪ ಕಡಕೋಳ, ಶೇಖಣ್ಣ ಮರೆಮ್ಮನವರ, ಮಳಪ್ಪ ಜಾಡರ, ರಾಜಶೇಖರ ಬಡ್ಡಿ, ಜಯಪ್ಪ ಜಾಡರ, ಷಣ್ಮುಖಗೌಡ ಪಾಟೀಲ, ರಮೇಶ ಆಲದಕಟ್ಟಿ, ಮಂಜುನಾಥ ರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು.