ರಾಣೆಬೆನ್ನೂರ

ರಾಜ್ಯ ಹೆದ್ದಾರಿಯಿಂದ ಹುಲ್ಲತ್ತಿ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ..!

ರಾಜ್ಯ ಹೆದ್ದಾರಿಯಿಂದ ಹುಲ್ಲತ್ತಿ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ  ಒತ್ತಾಯ..!

ಕೆ. ಎಸ್‌. ನಾಗರಾಜ್   

ರಾಣೇಬೆನ್ನೂರು 26:  ನಗರ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿರುವ ಹಿಂದುಳಿದ ಗ್ರಾಮ ಈ ಗ್ರಾಮದಲ್ಲಿ ಸುಮಾರು 160ಕ್ಕು ಹೆಚ್ಚು ಮನೆಗಳನ್ನು ಹೊಂದಿದ್ದು, ಇಲ್ಲಿ ಶೇಕಡ 80 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳು ವಾಸವಾಗಿರುವಂತಹ ಗ್ರಾಮದಲ್ಲಿ ಎಲ್ಲಾ ಸಮುದಾಯದ ನಾಗರಿಕರು ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ದಿನ ನಿತ್ಯದ ಉಪ ಜೀವನಕ್ಕಾಗಿ ಹಮಾಲಿ ಕೆಲಸ, ಜಿನ್ನಿಂಗ್ ಪ್ಯಾಕ್ಟರಿ, ಮನೆ ಕಟ್ಟಡ, ಬಟ್ಟೆ ಅಂಗಡಿ, ಹೊಟೇಲ, ಕೃಷಿ ಇತರೆ ಕೂಲಿ ಕೆಲಸಕ್ಕೆ ಮತ್ತು ಶಿಕ್ಷಣ ಆರೋಗ್ಯ ಸೇವೆಗೆ ನಗರ ಪ್ರದೇಶವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನ ಹುಲ್ಲತ್ತಿ ಗ್ರಾಮವು ಸಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿವಾಗಿ, ಓದ್ಯೋಗಿಕವಾಗಿ ಹಿಂದುಳಿದ ಗ್ರಾಮವಾಗಿದೆ.   

ರಾಜ್ಯ ಹೆದ್ದಾರಿಯಿಂದ 800 ಮೀಟರ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹ: ರಾಣೇಬೆನ್ನೂರು ನಗರ ಪ್ರದೇಶದಿಂದ ಹುಲ್ಲತ್ತಿ ಗ್ರಾಮಕ್ಕೆ ಪ್ರಸ್ತುತ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅನಾನುಕುಲವಾಗಿದೆ. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಸುರಿದರೆ ಈ ರಸ್ತೆಯ ಮೇಲೆ 3 ಅಡಿ ಎತ್ತರ ನೀರು 2 ಕಿ.ಮೀ.ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿದೆ. ಇಂತಹ ಸಂದರ್ಭಗಳಲ್ಲಿ ವಾಹನ ಸವಾರರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರಾಣಭಿತಿಯಿಂದ ಅನೇಕ ಬಾರಿ ರಾತ್ರಿ ವೇಳೆಯಲ್ಲಿ ನಗರ ಪ್ರದೇಶದಲ್ಲಿ ಉಳಿದುಕೊಂಡು ಬಂದಿರುವ ಉದಾರಣೆಗಳಿವೆ. ರಸ್ತೆಯು ಉಬ್ಬು ತಗ್ಗುಗಳಿಂದ ಹಾಳಾಗಿದ್ದು ಯಾವೂದೆ ಖಾಸಗಿ ವಾಹನಗಳು ಸಂಚರಿಸುವದಿಲ್ಲಾ, ಆದ್ದರಿಂದ ಜನರ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಹುಲ್ಲತ್ತಿ ಗ್ರಾಮದಿಂದ 800 ಮೀಟರ ದೂರದ ಕಾಲುದಾರಿಯ ಮುಖಾಂತರ ಬಾಗಲಕೊಟಿ-ಬಳೀಗೀರಿ ರಂಗನಬೇಟ್ಟ (ಗತ್ತಲ ರಸ್ತೆ) ರಾಜ್ಯ ಹೆದ್ದಾರಿ ರಸ್ತೆ ಮುಖಾಂತರ ವಾಹನಗಳನ್ನು ತಡೆದು ರಾಣೇಬೆನ್ನೂರು ಮತ್ತು ಇತರೆ ಗ್ರಾಮಗಳಿಗೆ ಸರ್ಕಾರಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಸುಮಾರು 50 ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ಕಾಲುದಾರೆಯನ್ನೇ ಅವಲಂಬಿಸಿದ್ದೆವೆ ಎನ್ನುತಾರೆ.  

ಕಾಲುದಾರಿಯನ್ನು ಅಧಿಕೃತ ರಸ್ತೆಯನ್ನಾಗಿ ನಿರ್ಮಿಸಿ:  ಹುಲ್ಲತ್ತಿ ಗ್ರಾಮದಿಂದ 800 ಮೀಟರ್ ಅಂತರವಿರುವ ಬಾಗಲಕೊಟಿ ಬಿಳೀಗೀರಿ ರಂಗನಬೆಟ್ಟ ರಾಜ್ಯ ಹೆದ್ದಾರೆ (ಗುತ್ತಲ ರಸ್ತೆ) ರಸ್ತೆಗೆ ಹೊಂದಿಕೊಂಡಿರುವ ಕಾಲುದಾರಿಯನ್ನು ಸರ್ಕಾರ ಅಧಿಕೃತ ರಸ್ತೆಯನ್ನಾಗಿ ನಿರ್ಮಿಸಿದರೆ ಸಾರ್ವಜನಿಕ ಹೆಚ್ಚು ಅನುಕೂಲವಾಗುತ್ತದೆ. ಹುಲ್ಲತ್ತಿ ಗ್ರಾಮದಲ್ಲಿ 1ನೇ ತರಗತಿಯಿಂದ 6ನೇ ತರಗತಿವರೆಗೆ, ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಇದೆ. ಮುಂದಿನ ಪ್ರೌಢ ಮತ್ತು ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಕಾಲುದಾರಿ ಮುಖಾಂತರ ಶಾಲಾ ಕಾಲೇಜುಗಳಿಗೆ ಹೊಗಿಬರಲು ಅತಿ ಅವಶ್ಯಕ ರಸ್ತೆಯಾಗಿದೆ. ಹುಲ್ಲತ್ತಿ ಗ್ರಾಮಸ್ಥರು ಮುಖ್ಯವಾಗಿ ದೇವರಗುಡ್ಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ವೈ.ಟಿ ಹೊನ್ನತ್ತಿ ಗ್ರಾಮ ಪಂಚಾಯಿತಿಗೆ ಇದೆ ರಸ್ತೆ ಮುಖಾಂತರ ತಮ್ಮ ಕೆಲಸಗಳಿಗೆ ದಿನನಿತ್ಯ ಓಡಾಡುವ ರಸ್ತೆಯಾಗಿದೆ.  

ಧಾರ್ಮಿಕ ಸ್ಥಳಕ್ಕೆ ತೆರಳಲು ಸಾರ್ವಜನಿಕರಿಗೆ ಅನುಕೂಲ: ಹಾವೇರಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರ ಸ್ಥಾನಗಳಲ್ಲಿ ಹುಲ್ಲತ್ತಿ ಗ್ರಾಮವು ಒಂದು ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಪ್ರತಿ ಶನಿವಾರ, ಅಮಾವಾಸೆ ಮತ್ತು ಶ್ರಾವಣ ಮಾಸದಲ್ಲಿ ಸಾವೀರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹೊಗುತ್ತಾರೆ. ಮಳೆಗಾಲದ ಸಂದರ್ಭಗಳಲ್ಲಿ ಕಾಲುದಾರಿಯು ಕೆಸರುಗದ್ದೆಯಂತಾಗುತ್ತದೆ. ಸ್ವಾಮಿಯ ದರ್ಶಕ್ಕೆ ಬರುವ ಭಕ್ತಾಧಿಗಳು, ಸಣ್ಣ ಪುಟ್ಟ ಮಕ್ಕಳ ಜೋತೆಗೆ ಲಗೆಜುಗಳನ್ನು ಹೊತ್ತುಕೊಂಡು ಪಾದಯಾತ್ರೆ ಮುಖಾಂತಾರ ಶ್ರೀ ಆಂಜನೇಯ ಸ್ವಾಮಿಯ ದರ್ಶಕ್ಕೆ ಬಂದು ಹೊಗಲು ಭಕ್ತಾದಿಗಳು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕಾಲುದಾರಿ ರಸ್ತೆಯನ್ನು ಸರಳ ಮತ್ತು ಸಾರ್ವಜನಿಕ ಸಂಪರ್ಕದ ಅಧಿಕೃತ ರಸ್ತೆಯನ್ನಾಗಿ ನಿರ್ಮಿಸಲು ಸರ್ಕಾರವು ಸೂಕ್ತ ಕಾನೂನು ಕ್ರಮ ಕ್ರಮವನ್ನು ಕೈಗೊಂಡು ಭಕ್ತಾದಿಗಳಿಗೆ ಓಡಾಡಲು ಅನುವು ಮಾಡಿಕೊಡಬೇಕೆಂದು ಸ್ಥಳೀಯ ಭಕ್ತರು ತಿಳಿಸಿದರು.  

ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ರಸ್ತೆ ನಿರ್ಮಾಣ ಹೆಚ್ಚು ಅನುಕೂಲವಾಗಲಿದೆ: ಹುಲ್ಲತ್ತಿ ಗ್ರಾಮವು ಭೌಗೊಳಿಕವಾಗಿ ಚಿಕ್ಕ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಈ ಗ್ರಾಮವು ಸರ್ವ ಸಮುದಾಯಗಳು, ಶ್ರಮವಹಿಸಿ ದುಡಿಯುವ ಕಾಯಕವನ್ನು ಅವಲಂಭಿಸಿದೆ. ಆದ್ದರಿಂದ ಹುಲ್ಲತ್ತಿ ಗ್ರಾಮವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ,, ಓದ್ಯೋಗಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿ ಹೊಂದಲು ಅನುಕುಲವಾಗುತ್ತದೆ.   

ರಸ್ತೆ ನಿರ್ಮಾಣದಿಂದ ರೈತರು ಹೊಲ ಗದ್ದೆಗಳಿಗೆ, ಕೃಷಿ ಕಾರ್ಮಿಕರಿಗೆ, ಧಾರ್ಮಿಕ ಕ್ಷತ್ರಗಳಿಗೆ ಮತ್ತು ಹುಲ್ಲತ್ತಿ ತಾಂಡಾ, ಗಂಗಾಪುರ, ಬೆವಿನಹಳ್ಳಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಸಾಧಿಸಲು ಸಾರ್ವಜನಿಕರಿಗೆ ಹೆಚ್ಚು ಅನುಕುಲವಾಗುತ್ತಿದೆ.) ಗ್ರಾಮದ ಕಾಲುದಾರಿಯನ್ನು ಅಧಿಕೃತ ರಸ್ತೆಯನ್ನಾಗಿ ನಿರ್ಮಿಸಲು ಜಿಲ್ಲಾಧಿಕಾರಿಗಳು ಸ್ಥಳ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಂಡು ಹುಲ್ಲತ್ತಿ ಗ್ರಾಮಸ್ಥರಿಗೆ ಮೂಲಸೌಕರ್ಯಗಳ, ಸಮಾಜಿಕ ನ್ಯಾಯವನ್ನು ಒದಗಿಸುತ್ತಾರ ಎಂಬುದು ಕಾದು ನೋಡಬೇಕಾಗಿದೆ.  

ಹೊನ್ನಾಳಿಯಿಂದ ಗದಗ ಮಾರ್ಗವಾಗಿ ರಾಜ್ಯ ಹೆದ್ದಾರಿಯನ್ನು ಮಾಡಲಾಗುತ್ತಿದ್ದು, ಈ ಹೆದ್ದಾರಿಯಿಂದ ಕೇವಲ 800 ಮೀಟರ್ ನಮ್ಮ ಗ್ರಾಮವಿದ್ದು, ಇಲ್ಲಿ ಕಾಲುದಾರಿ ಇದೆ. ಪ್ರತಿನಿತ್ಯ ಗ್ರಾಮಸ್ಥರು, ಸಾರ್ವಜನಿಕರು, ವಿದ್ಯಾರ್ಥಿಗಳು ನಡೆದುಕೊಂಡು ಓಡಾಡಲು ಅನಾನುಕೂಲತೆಯಾಗುತ್ತಿದೆ. ಅದಕ್ಕೆ ಜಿಲ್ಲಾಧಿಕಾರಿಗಳ ಮತ್ತು ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದೇವೆ. ಅಪರ ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಭರವಸೆ ನೀಡಿದ್ದಾರೆ. ಅದರಂತೆ ತಾಲೂಕು ಲೋಕೋಪಯೋಗಿ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಗ್ರಾಮದ ಈ ರಸ್ತೆಯ ಸಮಸ್ಯೆಯನ್ನು ಬಗೆಹರಿಸಿ ಡಾಂಬರ್ ರಸ್ತೆಯನ್ನು ಮಾಡಿಕೊಡಲು ಮನವಿ ಮಾಡುತ್ತಿದ್ದೇನೆ.  

ಜಗದೀಶ್ ಕೆರೋಡಿ  

ಗ್ರಾಮದ ಮುಖಂಡರು 


ಸುದ್ದಿ ಓದಿ