ಸಂತೆಗಳಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ: ಪೂರ್ಣಾನಂದ ಮಹಾಸ್ವಾಮಿಗಳು
ನೇಸರಗಿ 10: ಗ್ರಾಮಗಳಲ್ಲಿ ವಿವಿಧ ಬಗೆಯ ಕಾಳು, ತರಕಾರಿ, ಬಟ್ಟೆ ಸೇರಿದಂತೆ ಹಲವು ವ್ಯಾಪಾರ ಚಟುವಟಿಕೆಗಳು ನಡೆಯುವುದರಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಪೂರ್ಣಾನಂದ ಮಹಾಸ್ವಾಮಿಗಳು ಹೇಳಿದರು. ಸಮೀಪದ ಮುರಕೀಭಾವಿ ಗ್ರಾಮದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆವರೆಗೆ ವಾರಕ್ಕೊಮ್ಮೆ ನಡೆಯುವ ಪ್ರಥಮ ಸಂತೆಯನ್ನು ಪರಮಪೂಜ್ಯ ಪೂರ್ಣಾನಂದ ಮಹಾಸ್ವಾಮಿಗಳು ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂತೆಗಳು ಗ್ರಾಮೀಣ ಜನರಿಗೆ ಅಗತ್ಯ ವಸ್ತುಗಳು ಸುಲಭವಾಗಿ ದೊರೆಯುವಂತೆ ಮಾಡುವುದರ ಜೊತೆಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಇದರಿಂದ ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಈರನಗೌಡ ದೊಡ್ಡಗೌಡರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಪಾಟೀಲ,
ಅಡಿವೆಪ್ಪ ಮೋಟಗಿ, ಹಿರಿಯರಾದ ಶಿವಲಿಂಗಪ್ಪ ಶಿವಬಸವನವರ, ಗಂಗಪ್ಪ ಮಲ್ಲಾರಿ, ಈಶ್ವರ ಮಿಡಕನಹಟ್ಟಿ, ಸೋಮಪ್ಪ ಮಲ್ಲಾರಿ ರಾಯಿನಾಯ್ಕ ನಾಯ್ಕರ, ದೊಡ್ಡಗೌಡ ಪಾಟೀಲ, ಶಿವರುದ್ರ್ಪ ಊಟಕೇರಿ, ರುದ್ರ್ಪ ಸಾವಳಗಿ, ಬಸಯ್ಯ ಸುಂಕದ, ಶಿಕ್ಷಕರಾದ ಅರ್ಜುನ ಕೊನ್ನಿನವರ, ಅಡಿವೆಪ್ಪ ಉಳ್ಳವಿ, ಸಿದ್ದರಾಮ ಉಳ್ಳವಿ ಸೇರಿದಂತೆ ಮುರಕೀಭಾವಿ ಗ್ರಾಮದವರು, ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಉಪಸ್ಥಿತರಿದ್ದರು.