ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಗ್ರಾಮ ಸ್ವರಾಜ್ಯ: ಬೊಮ್ಮಾಯಿ
ಲೋಕದರ್ಶನ ವರದಿ
ಶಿಗ್ಗಾವಿ 31: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಗ್ರಾಮ ಸ್ವರಾಜ್ಯ ಮಾಡಲು ಸಾಧ್ಯವಾಗಲಿದ್ದು, ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿಯ ಅವರ ನಿವಾಸದ ಸಭಾಭವನದಲ್ಲಿ ಬಿಜೆಪಿ ಮಂಡಳದ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ ಅವರು, ಫೆಬ್ರವರಿ ತಿಂಗಳ ಬಜೆಟ್ನಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ಆರವತ್ತು ಲಕ್ಷಕ್ಕೂ ಹೆಚ್ಚು ಹಣ ನೀಡುವ ತಿರ್ಮಾನ ಮಾಡಿದ್ದೇವು. ಆದರೆ, ಈಗಿನ ಸರಕಾರ ಅದನ್ನು ನಿಲ್ಲಿಸಿದೆ, ಈ ಕಾಂಗ್ರೆಸ್ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಗ್ರಾಪಂಗಳ ಕುರಿತು ಇಲ್ಲ, ಏಪ್ರೀಲ್ ತಿಂಗಳಲ್ಲಿ ನಾನು ಮಂಡಿಸಿದ ಬಜೆಟ್ ನಲ್ಲಿ ಗ್ರಾಪಂಗಳಿಗೆ ಅನುಧಾನವನ್ನ ಕೊಡಬೇಕು ಎಂದು ಕಾಂಗ್ರೇಸ್ ಸರಕಾರಕ್ಕೆ ಒತ್ತಾಯಿಸುತ್ತೇನೆ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ನೀಡಿರುವ ಅನುದಾನವನ್ನು ನೀಡುವಂತೆ ಸರಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದರು.
ನಿಜವಾದ ಭಾರತದ ಸ್ವರಾಜ್ಯ ಗ್ರಾಮದಲ್ಲಿದೆ ಎನ್ನುವ ಗಾಂಧಿಜಿಯವರು ಕನಸು ಕಂಡಂತೆ ಗ್ರಾಮಗಳು ಅಭಿವೃದ್ಧಿಯಾದರೆ ಭಾರತದ ಅಭಿವೃದ್ಧಿ ಆದಂತೆ, ನಮ್ಮ ಅವಧಿಯಲ್ಲಿ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 250 ಕೋಟಿ ಅನುದಾನ ನೀಡಿದ್ದೇವು. ಆದರೆ, ಈ ಸರಕಾರ ಆ ಅನುದಾನವನ್ನು ಸ್ಥಗಿತಗೊಳಿಸಿದೆ, ಪ್ರತಿ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ನಾವು ಜಲಜೀವನ ಮಿಷನ್ ಜಾರಿ ಮಾಡಿದ್ದೇವು ಆದರೆ, ಈ ಸರ್ಕಾರ ಬಂದ ನಂತರ ಕುಂಠಿತಗೊಂಡಿದೆ, ನಾವು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವು. ಆದರೆ, ಈ ಸರಕಾರ ಮಂದಗತಿಯಲ್ಲಿದೆ ಹೆಚ್ಚಿನ ಪ್ರಮಾಣದ ಹಣವನ್ನು ಬಿಡಗಡೆ ಮಾಡಿದರೆ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ, ಎಲ್ಲ ರಂಗಗಳಲ್ಲಿ ಅನುಧಾನ ಕಡಿತವಾಗಿರುವುದನ್ನ ನಾವು ಕಾಣುತ್ತಿದ್ದೇವೆ ಅದನ್ನು ನೀಗಿಸುವ ಕೆಲಸವನ್ನ ಈ ಸರಕಾರ ಮಾಡಬೇಕು ನಾನು ನಿಮ್ಮನ್ನ ಕೇವಲ ಸತ್ಕಾರ ಮಾಡಲು ಕರೆಸಿಲ್ಲ, ನಿಮ್ಮ ಜೊತೆ ನಾ ಇದ್ದೇನೆ ಎಂಬುದನ್ನ ತಿಳಿಸಲು ಕರೆಸಿದ್ದೆನೆ ಎಂದರು.
ಶಿಗ್ಗಾವಿ ಬಿಜೆಪಿ ಅದ್ಯಕ್ಷ ಇವಾನಂದ ಮ್ಯಾಗೇರಿ, ಸವಣೂರ ಬಿಜೆಪಿ ಅದ್ಯಕ್ಷ ಗಂಗಾಧರ ಬಾಣದ, ಕೆಎಂಎಫ್ ನಿದರ್ೇಶಕ ಬಸವನಗೌಡ ಮೇಗಲಮನಿ, ಮುಖಂಡರಾದ ತಿಪ್ಪಣ್ಣ ಸಾತಣ್ಣವರ, ದೇವಣ್ಣ ಚಾಕಲಬ್ಬಿ, ಶೋಭಾ ನಿಸ್ಸಿಮಗೌರ, ಡಾ. ಮಲ್ಲೇಶಪ್ಪ ಹರಿಜನ, ಹನುಮರೆಡ್ಡಿ ನಡುವಿನಮನಿ, ಗಂಗಣ್ಣ ಹುಲ್ಲೂರ, ಶಶಿಧರ ಹೊನ್ನಣ್ಣವರ, ರೇಣುಕನಗೌಡ ಪಾಟೀಲ, ನಿಂಗಣ್ಣ ಹರಿಜನ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಶಿಗ್ಗಾವಿ ತಾಲೂಕಿನ ನೂತನವಾಗಿ ಆಯ್ಕೆಯಾಗಿರುವ ವಿವಿಧ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯಕರ್ತರು ಇದ್ದರು