ಸೌಂದತ್ತಿ

ಮದ್ಯವ್ಯಸನ ಮುಕ್ತರನ್ನಾಗಿಸುವ ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ: ವಿಶ್ವಾಸ ವೈದ್ಯ

ಮದ್ಯವ್ಯಸನ ಮುಕ್ತರನ್ನಾಗಿಸುವ ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ: ವಿಶ್ವಾಸ ವೈದ್ಯ

ಲೋಕದರ್ಶನ ವರದಿ 

ಸವದತ್ತಿ 23: ಮದ್ಯಪಾನ ಕುಡಿತದ ಚಟಕ್ಕೊಳಗಾಗಿ ಸಮಾಜದಲ್ಲಿ ಅನೇಕ ಕುಟುಂಬಗಳು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕುಡಿತದ ಚಟಕ್ಕೆ ಅಂಟಿಕೊಂಡಿರುವ ಜನರನ್ನು ಮದ್ಯವ್ಯಸನ ಮುಕ್ತರನ್ನಾಗಿ ಮಾಡುವಂತ ಕಾರ್ಯವನ್ನು ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಮಾಡುತ್ತಿರುವದು ಹೆಮ್ಮೆಯ ಸಂಗತಿ ಎಂದು ವಿಶ್ವಾಸ ವೈದ್ಯ ಹೇಳಿದರು. 

ಸ್ಥಳೀಯ ಗಂಗಾ-ಶಂಕರ ಮಂಗಲ ಕಾರ್ಯಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಸವದತ್ತಿ ಇವರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ ಬೆಳ್ತಂಗಡಿಯ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ 1576ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಡಾ.ವಿರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರದ ಮೂಲಕ ಲಕ್ಷಾಂತರ ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಿ ಅವರಿಗೆ ಉತ್ತಮ ಬದುಕು ಕಲ್ಪಿಸಿಕೊಟ್ಟಿದ್ದಾರೆ ಎಂದರು. 

ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪಲ್ಲವಿ ಪದಕಿ ಮಾತನಾಡಿ, ಪ್ರತಿಯೊಬ್ಬರು ವಯಕ್ತಿಕ ಬದುಕಿನ ಕಡೆಗೆ ಗಮನ ಹರಿಸಿ ತಮ್ಮ ಕುಟುಂಬ ಸದಸ್ಯರೊಂದಿಗೆ ಬೆರೆಯುವ ಮೂಲಕ ದುಶ್ಚಟಗಳಿಂದ ಮುಕ್ತರಾಗಬೇಕೆಂದರು.  

ಯೋಜನಾಧಿಕಾರಿ ಆಶಾ ಮಹೇಶ ಹಾಗೂ ಮಹಾಂತೇಶ ಕಾಜಗಾರ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಡಾ.ಮಹೇಶ ಚಿತ್ತರಗಿ, ಪುಂಡಲೀಕ ಬಾಳೋಜಿ, ಮಹಾಂತೇಶ ಆಲಾಜ, ರೇಣುಕಾತಾಯಿ ಪಾಟೀಲಪದಕಿ ಇತರರು ಉಪಸ್ಥಿತರಿದ್ದರು. ಮೇಲ್ವಿಚಾರಕ ಗಣೇಶ ನಾಯ್ಕ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ