ಸದ್ಯದಲ್ಲೇ ಸೆಟ್ಟೇರಲಿದೆ ವಿಕ್ರಂ ರವಿಚಂದ್ರನ್ ನೂತನ ಸಿನಿಮಾ
ಬೆಂಗಳೂರು,
ಆಗುಸ್ಟ್ 24: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ
ನೂತನ ಚಿತ್ರ ಸದ್ಯದಲ್ಲೇ ಆರಂಭವಾಗಲಿದ್ದು, ರಗಡ್
ಪಾತ್ರದಲ್ಲಿ ಮಿಂಚಲಿದ್ದಾರೆ.ಮಾಸ್ ಕಥಾಹಂದರದೊಂದಿಗೆ,
ಸೆಂಟಿಮೆಂಟ್ ಸನ್ನಿವೇಶಗಳು ಚಿತ್ರದಲ್ಲಿದ್ದು, ತಾಯಿ ಹಾಗೂ ಮಗನ ನಡುವಿನ ಭಾಂದವ್ಯದ ದೃಶ್ಯಗಳು ಜನರ
ಮನಸ್ಸಿಗೆ ಹತ್ತಿರವಾಗಲಿದೆಯಂತೆ.
ಮನು ನಾಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಹಾಗೂ ಮಲೆಯಾಳಂನ ಪ್ರಸಿದ್ದ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಮನು ನಾಗ್, ಬಹುಭಾಷ ನಟಿ ಪ್ರಿಯಾಮಣಿ ಅವರ ಅಭಿನಯದ ‘ವೈಟ್’ ಕಿರುಚಿತ್ರ ನಿರ್ದೇಶಿಸಿದ್ದರು. ಚಿತ್ರರಂಗದ ಇತಿಹಾಸಾದಲ್ಲೇ ಮೊದಲ ಬಾರಿಗೆ ಕಿರುಚಿತ್ರವೊಂದಕ್ಕೆ ಬಿಗ್ ಬಿ ಅಮಿತಾಭ್ ಬಚ್ಚನ್ ಧ್ವನಿ ನೀಡಿದ್ದರು.
ಮನು ನಾಗ್ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಬಂಡವಾಳ ಹೂಡುತ್ತಿದ್ದಾರೆ.ನಾಯಕನ ಪಾತ್ರ ಹೊರತು ಪಡಿಸಿ ಉಳಿದ ತಾರಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಮಾಹಿತಿ ಸಿಗಲಿದೆಯಂತೆ.