ಹೊಸಪೇಟೆ

ವಿಜಯನಗರ ವಿಧಾನಸಭಾ ಕ್ಷೇತ್ರ:ಮತದಾರರ ಪಟ್ಟಿ ಪರಿಷ್ಕರಣಾ ಸಭೆ

ವಿಜಯನಗರ ವಿಧಾನಸಭಾ ಕ್ಷೇತ್ರ:ಮತದಾರರ ಪಟ್ಟಿ ಪರಿಷ್ಕರಣಾ ಸಭೆ

ವಿಜಯನಗರ(ಹೊಸಪೇಟೆ) 06: ವಿಜಯನಗರ ವಿಧಾನಸಭೆ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿಜಯನಗರ ಜಿಲ್ಲಾ ಒಳ ಕ್ರೀಡಾಂಗಣದಲ್ಲಿ ಶನಿವಾರದಂದು ತಹಶಿಲ್ದಾರ ಹೆಚ್‌.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಸಭೆ ಹಮ್ಮಿಕೊಳ್ಳಲಾಗಿತ್ತು. 

ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು ಮತಗಟ್ಟೆ ಅಧಿಕಾರಿಗಳು ತಮಗೆ ವಹಿಸಿರುವ ಚುನಾವಣೆ ಕೆಲಸವನ್ನು ಯಾವುದೇ ಲೋಪವಾಗದಂತೆ ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಹೇಳಿದರು. 

ನ.08 ರಿಂದ ಡಿ.08 ರವರೆಗೆ ಮತದಾರರ ಪಟ್ಟಿ ಸೇರೆ​‍್ಡ ಮತ್ತು ಆಕ್ಷೇಪಣೆ ಸಲ್ಲಿಸಬಹುದು. ನ.07,14,21,28 ರಂದು ವಿಶೇಷವಾಗಿ ಭಾನುವಾರಗಳಲ್ಲಿ ಮತಗಟ್ಟೆ ಅಧಿಕಾರಿಗಳು, ವಿಜಯನಗರ ವಿಧಾನಸಭೆಯ 247 ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟವರನ್ನು ಮತಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಯಾವುದಾದರೂ ದಾಖಲಾತಿಯೊಂದಿಗೆ ಜನನ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್‌, ಶಾಲಾ ಧೃಢೀಕರಣ ಪತ್ರ, ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರ, ಪಾನ್ ಕಾರ್ಡ್‌, ಎಲ್‌.ಐ.ಸಿ. ಬಾಂಡ್ ಜೆರಾಕ್ಸ್‌ ಪ್ರತಿ ಹಾಗೂ ವಾಸದ ಬಗ್ಗೆ ದಾಖಲಾತಿ, ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್‌, ತಹಶೀಲ್ದಾರರು ನೀಡಿದ ವಾಸಸ್ಥಳ ಪತ್ರ, ಮನೆ ತೆರಿಗೆ, ಮನೆ ಮಾಲಿಕರಿಂದ ಕರಾರು ಪತ್ರ, ಅರ್ಜಿದಾರರ ಕುಂಟುಂಬ ಹೊಂದಿದ ಐ.ಡಿ. ಕಾರ್ಡ್‌ ಜೆರಾಕ್ಸ್‌ ಪ್ರತಿ ಕಡ್ಡಾಯವಾಗಿ ನಿಗದಿತ ಅರ್ಜಿ ನಮೂನೆ ಭರ್ತಿಮಾಡಿಕೊಳ್ಳಬೇಕು. ಅಲ್ಲದೇ ನಿಗದಿತ ದಿನಗಳಲ್ಲಿ ಆಯಾ ಮತಗಟ್ಟೆಗಳ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಬಹುದಾಗಿದ್ದು, ಅವರು ಕೇಳಿದ ಮಾಹಿತಿಯನ್ನು ಸಮರ​‍್ಕವಾಗಿ ನೀಡುವಂತೆ ತಿಳಿಸಿದರು. ಈ ಕೆಲಸದಲ್ಲಿ ಯಾವುದೇ ಸಮಸ್ಯೆ ಇದ್ದರೂ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೆ ಬಗೆಹರಿಸುವುದಾಗಿ ಹೇಳಿದರು. 

ಚುನಾವಣೆ ವಿಭಾಗದ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಾನಾ ಮಾಹಿತಿಗಳನ್ನು ಚುನಾವಣೆ ಅಧಿಕಾರಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸುನಂದಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಯಾದ ನಾಗಪ್ಪ(ಎಸಿಡಿಪಿಒ) ಮತಗಟ್ಟೆಯ ಮೇಲ್ವಿಚಾರಕ ಸೋಮಪ್ಪ ಬಡಿಗೇರ್ ಮತ್ತು ಇತರೆ ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ