ಹೊಸಪೇಟೆ

ವಿಜಯನಗರ: ಅಗ್ನಿಶಾಮಕ ಇಲಾಖೆಯಿಂದ ಸೇವಾ ಸಪ್ತಾಹ ಕಾರ್ಯಕ್ರಮ ಆಚರಣೆ

ವಿಜಯನಗರ: ಅಗ್ನಿಶಾಮಕ ಇಲಾಖೆಯಿಂದ ಸೇವಾ ಸಪ್ತಾಹ ಕಾರ್ಯಕ್ರಮ ಆಚರಣೆ

ಹೊಸಪೇಟೆ(ವಿಜಯನಗರ) 20: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ಏ.14ರಿಂದ ಏ.20ರವರೆಗೆ  “ಅಗ್ನಿ ಸುರಕ್ಷತೆ ಕಲಿಯಿರಿ ಉತ್ಪಾದನೆಯನ್ನು ಹೆಚ್ಚಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯಾದಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಹಮ್ಮಿಕೊಳ್ಳಲಾಯಿತು ಎಂದು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೃಷ್ಣಸಿಂಗ್ ಅವರು ತಿಳಿಸಿದ್ದಾರೆ. 

ಕಾರ್ಯಕ್ರಮದ ನಿಮಿತ್ತ ಬುಧವಾರದಂದು ಹೊಸಪೇಟೆಯ ಟಿ.ಬಿ.ಡ್ಯಾಮ್ ಪವರ್ ಹೌಸ್‌ನಲ್ಲಿ (ಒಓಅಏ ಆಖಋಐ)ಅಣಕು ಪ್ರದರ್ಶನವನ್ನು ಮಾಡಲಾಯಿತು. 


ಸುದ್ದಿ ಓದಿ