ಶಿಗ್ಗಾವ್

ವಿದ್ಯಾಲಯವೇ ದೇಗುಲವಾಗಿದೆ: ತೇಜೊಮಯಿ

ವಿದ್ಯಾಲಯವೇ ದೇಗುಲವಾಗಿದೆ: ತೇಜೊಮಯಿ

ಲೋಕದರ್ಶನ ವರದಿ

ಶಿಗ್ಗಾವಿ 04: ಮನೆಗಿಂತ ಹೆಚ್ಚಿನ ಸಮಯವನ್ನು ನಾವು ಶಾಲೆಯಲ್ಲಿ ಕಳೆಯುವುದರಿಂದ ನಮಗೆ ವಿದ್ಯಾಲಯವೇ ದೇಗುಲವಾಗಿದೆ ಎಂದು ವಿದ್ಯಾರ್ಥಿ  ತೇಜೊಮಯಿ ಹೇಳಿದರು.

     ಪಟ್ಟಣದ ಕುನ್ನೂರ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ ಗುರು ಪೂರ್ಣಿಮಾ ಉದ್ದೇಶಿಸಿ ಮಾತನಾಡಿದ ಅವರು ಗುರುಗಳು ವಿದ್ಯಾರ್ಥಿಗಳಿಗೆ ಭೇದ ಬಾವ ಮಾಡದೇ ಸಮಾನವಾಗಿ  ಕಾಣಬೇಕು ಎಂದರು.

    ವಿದ್ಯಾರ್ಥಿ ಅಭಿಷೇಕ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಿರಸ್ಕರಿಸಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಅಂತಹ ಮಕ್ಕಳ ಪಾಲಕರಿಗೆ  ತಿಳಿಸಿ ಹೇಳಬೇಕೆಂದರು.

  ವಿದ್ಯಾರ್ಥಿ ಅಜಯ ಮಾತನಾಡಿ  ಗುರುಗಳು ಹೇಳಿದ ಹಾಗೆ ಕೇಳಿದರೆ ನಮ್ಮ ಭವಿಷ್ಯ ಉಜ್ವಲವಾಗುತ್ತದೆ ಇಲ್ಲದಿದ್ದರೆ ನಮ್ಮ ಭವಿಷ್ಯದ ಕನಸು ನನಸಾಗುವುದಿಲ್ಲ ಎಂದರು. ವಿದ್ಯಾರ್ಥಿಗಳಾದ ನಂದಿನಿ, ವಿಧ್ಯಾ, ಸೌಮ್ಯ, ವೇದಾಂತ, ರಘೋತ್ತಮ ಮಾತನಾಡಿದರು.

 10ನೇ ತರಗತಿಯ ವಿದ್ಯಾರ್ಥಿಗಳಿಂದ ಪ್ರಾಚಾರ್ಯ ಶಿವು ಹಾವೇರಿಯವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ, ಗೌರವಿಸಿ, ನೆನಪಿನ ಕಾಣಿಕೆಯನ್ನು ನೀಡಿದರು. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪೂರ್ವಿಕಾ ಸ್ವಾಗತಿಸಿದರು, ಲಕ್ಷ್ಮೀ ನಿರೂಪಿಸಿದರು, ವೈಷ್ಣವಿ ವಂದಿಸಿದರು 

ಸುದ್ದಿ ಓದಿ