ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಭವಿಷ್ಯದ ಪ್ರಗತಿಗೆ ಶಿಕ್ಷಣವಂತರಾಗಬೇಕು - ಕೆ.ಹಳದಪ್ಪ
ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಭವಿಷ್ಯದ ಪ್ರಗತಿಗೆ ಶಿಕ್ಷಣವಂತರಾಗಬೇಕು - ಕೆ.ಹಳದಪ್ಪ
ರಾಣೆಬೆನ್ನೂರು 12 : ವಿದ್ಯಾರ್ಥಿಗಳ ಮಾನಸಿಕ, ದೈಹಿಕ, ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಾಚಾರ್ಯ,ಕೆ. ಹಳದಪ್ಪ ಹೇಳಿದರು.. ಅವರುಇಲ್ಲಿನ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪೋಷಕರ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಈ ದೇಶದ ಆಸ್ತಿ ಈ ನಿಟ್ಟಿನಲ್ಲಿ ಪೋಷಕರು, ಉಪನ್ಯಾಸಕರು ಹೇಳಿದಂತೆ ಕೇಳಿ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಶಿಕ್ಷಣ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ನಮ್ಮ ಗುರಿ ಇರಬೇಕು, ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಉಪನ್ಯಾಸಕ ಹೆಚ್. ಶಿವಾನಂದ ಮಾತನಾಡಿ, ಪೋಷಕರ ಸಭೆಯ ಉದ್ದೇಶ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮಾತ್ರವಲ್ಲದೆ, ಅವರ ನಡವಳಿಕೆ, ಹಾಜರಾತಿ, ಕೌಶಲ್ಯ ಮತ್ತು ಭವಿಷ್ಯದ ಬಗ್ಗೆ ಚರ್ಚಿಸುವುದೇ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಯಶಸ್ಸು ಕಾಲೇಜಿಗಷ್ಟೇ ಅಲ್ಲ, ಪೋಷಕರಿಗೂ ಕೂಡ ಹಿರಿಮೆ ಮತ್ತು ಪೋಷಕರು,ಉಪನ್ಯಾಸಕರು ಒಟ್ಟಾಗಿ ಕೆಲಸ ಮಾಡಿದರೆ ನಮ್ಮ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದರು. ವೇದಿಕೆಯಲ್ಲಿಉಪನ್ಯಾಸಕರಾದ ರೇವಣ್ಣನಾಯ್ಕ, ಹೆಚ್. ಓಂಕಾರ್ ನಾಯಕ, ಆಶಾ ಕೆ. ಜೆ, ಪ್ರವೀಣ ಪಾಟೀಲ, ಅಭಿರಾಜ ಪಾಟೀಲ, ಸುನಿತಾ ಎಸ್, ಅಕ್ಷತಾ ಮತ್ತಿ ತರರು ಉಪಸ್ಥಿತರಿದ್ದರು. ಪೋಷಕರಾದ ಸುಭಾಷ್ .ಡಿ.ಕೆಂಗಲೆ, ವಿದ್ಯಾ ಪುಕಾಳೆ , ಸತೀಶ್ ಬಣಕಾರ, ಸಿದ್ದಪ್ಪ, ವಿನಾಯಕ ಬಡಿಗೇರ, ಶಿವಾನಂದ ಲಮಾಣಿ, ಗೀತಾ ಸೊಪ್ಪಿನ, ಪಾರ್ವತಿ, ಮಂಜುಳಾ, ಅಂಜನ್ ತಾಜ್, ಲಕ್ಷ್ಮಿ ದೇವಿ, ದ್ರಾಕ್ಷಾಯಿಣಿ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.