ರಾಣೆಬೆನ್ನೂರ

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದತ್ತ ಗಮನಹರಿಸಲಿ: ಕೆ. ಹಳದಪ್ಪ

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದತ್ತ ಗಮನಹರಿಸಲಿ: ಕೆ. ಹಳದಪ್ಪ
Vidyārthigaḷa duścaṭagaḷige baliyāgade śikṣaṇadatta gamanaharisali: Ke. Haḷadappa

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದತ್ತ ಗಮನಹರಿಸಲಿ: ಕೆ. ಹಳದಪ್ಪ  

ರಾಣೆಬೆನ್ನೂರು, ಸೆ. 12: ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಹಳದಪ್ಪ ಹೇಳಿದರು.  

ನಗರದ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026-27ನೇ ಶೈಕ್ಷಣಿಕ ಸಾಲಿನ ಪೋಷಕರ ಪ್ರಥಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿದ್ದು, ಪೋಷಕರು ಹಾಗೂ ಉಪನ್ಯಾಸಕರ ಮಾರ್ಗದರ್ಶನವನ್ನು ಪಾಲಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಶಿಕ್ಷಣವನ್ನು ಪೂರ್ಣಗೊಳಿಸುವುದೇ ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.  

ಉಪನ್ಯಾಸಕ ಹೆಚ್‌. ಶಿವಾನಂದ ಮಾತನಾಡಿ, ಪೋಷಕರ ಸಭೆಯ ಉದ್ದೇಶ ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರೀಶೀಲಿಸುವುದಲ್ಲ. ಅವರ ನಡವಳಿಕೆ, ಹಾಜರಾತಿ, ಕೌಶಲ್ಯ ಹಾಗೂ ಭವಿಷ್ಯದ ಕುರಿತು ಚರ್ಚಿಸುವುದೂ ಮುಖ್ಯವಾಗಿದೆ. ವಿದ್ಯಾರ್ಥಿಗಳ ಯಶಸ್ಸು ಕಾಲೇಜಿನ ಜೊತೆಗೆ ಪೋಷಕರಿಗೂ ಹೆಮ್ಮೆಯ ಸಂಗತಿಯಾಗಿದ್ದು, ಪೋಷಕರು ಮತ್ತು ಉಪನ್ಯಾಸಕರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ ಎಂದರು.  

ವೇದಿಕೆಯಲ್ಲಿ ಉಪನ್ಯಾಸಕರಾದ ರೇವಣ್ಣನಾಯ್ಕ, ಹೆಚ್‌. ಓಂಕಾರ್ ನಾಯಕ, ಆಶಾ ಕೆ.ಜೆ., ಪ್ರವೀಣ ಪಾಟೀಲ, ಅಭಿರಾಜ ಪಾಟೀಲ, ಸುನಿತಾ ಎಸ್‌., ಅಕ್ಷತಾ ಮತ್ತಿತರರು ಉಪಸ್ಥಿತರಿದ್ದರು.  

ಪೋಷಕರಾದ ಸುಭಾಷ್ ಡಿ. ಕೆಂಗಲೆ, ವಿದ್ಯಾ ಪುಕಾಳೆ, ಸತೀಶ್ ಬಣಕಾರ, ಸಿದ್ದಪ್ಪ, ವಿನಾಯಕ ಬಡಿಗೇರ, ಶಿವಾನಂದ ಲಮಾಣಿ, ಗೀತಾ ಸೊಪ್ಪಿನ, ಪಾರ್ವತಿ, ಮಂಜುಳಾ, ಅಂಜನ್ ತಾಜ್, ಲಕ್ಷ್ಮಿದೇವಿ, ದ್ರಾಕ್ಷಾಯಿಣಿ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 


ಸುದ್ದಿ ಓದಿ