ಉತ್ತರಾಖಂಡ ಸಂಸ್ಥಾಪನಾ ದಿನ : ಉಪ ರಾಷ್ಟ್ರಪತಿ ಅಭಿನಂದನೆ
ನವದೆಹಲಿ, ನವೆಂಬರ್ 09ಉತ್ತರಾಖಂಡ ಸಂಸ್ಥಾಪನಾ ದಿನದಂದು
ರಾಜ್ಯದ ಜನತೆಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿನಂದನೆ ಸಲ್ಲಿಸಿದ್ದಾರೆ.
"ರಾಜ್ಯ ರಚನೆ ದಿನದಂದು ಉತ್ತರಾಖಂಡದ ಜನರಿಗೆ ಶುಭಾಶಯಗಳು. ದೇವಭೂಮಿ 'ದೇವರ ಭೂಮಿ' ಎಂದು ಕರೆಸಿಕೊಳ್ಳುವ ಉತ್ತರಾಖಂಡ್ ತನ್ನ ಸೌಂದರ್ಯ ಮತ್ತು ಶ್ರೀಮಂತ ಆಧ್ಯಾತ್ಮಿಕ ಪರಂಪರೆಗೆ ಹೆಸರುವಾಸಿಯಾಗಿದೆ. ರಾಜ್ಯ ಮತ್ತು ಅದರ ಶ್ರಮಶೀಲ ಜನರ ಪ್ರಗತಿ ಮತ್ತು ಸಮೃದ್ಧಿಗೆ ನನ್ನ ಶುಭಾಶಯಗಳು "ಎಂದು ಟ್ವೀಟ್ ಮೂಲಕ ವೆಂಕಯ್ಯನಾಯ್ಡು ತಿಳಿಸಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ 2000 ರಲ್ಲಿ ಇದೇ ದಿನ ಉತ್ತರಾಖಂಡವನ್ನು ಉತ್ತರಪ್ರದೇಶದಿಂದ ವಿಭಜಿಸಿನೂತನ ರಾಜ್ಯವನ್ನು ರಚಿಸಲಾಯಿತು.