ಶಿಗ್ಗಾವ್

ಪ್ರಗತಿ ರಥಕ್ಕೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಚಾಲನೆ

ಪ್ರಗತಿ ರಥಕ್ಕೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಚಾಲನೆ

ಶಿಗ್ಗಾವಿ  : ಪಟ್ಟಣದ ಮಂಡಲದಲ್ಲಿ ಇಂದು ಪ್ರಗತಿ ರಥಕ್ಕೆ ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ  ಹಾಗೂ ವಾಯುವ್ಯ ಸಾರಿಗೆ ನಿಗಮ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಚಾಲನೆ ನೀಡಿದರು.  

ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಧಾನಿ  ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ  ಅನುಷ್ಟಾನ ಗೊಳಿಸಿದ ಜನಪರ ಅಭಿವೃದ್ಧಿಪರ ಯೋಜನೆಗಳನ್ನು ಕರಪತ್ರಗಳನ್ನು ಈಗಾಗಲೇ ಪ್ರತಿಯೊಂದು ಮನೆ ಮನೆಗೆ ಬೂತ್ ವಿಜಯ ಅಭಿಯಾನ ಹಾಗೂ ಸಂಕಲ್ಪ ವಿಜಯ ಅಭಿಯಾನದ ಮುಖಾಂತರ ಬಿಜೆಪಿ ಧ್ವಜಾರೋಹಣ ಗೋಡೆ ಬರಹ ಮುಖಾಂತರ ಜನರಿಗೆ ತಲುಪಿಸಿದ್ದೇವೆ ಅವುಗಳ ಜೊತೆಗೆ ಇಂದು ಪ್ರಗತಿ ರಥ ಸಂತೋಷದಿಂದ ಚಾಲನೆ ನೀಡಿದ್ದೇವೆ ಪ್ರತಿಯೊಂದು ಹಳ್ಳಿಯಲ್ಲಿ ಈ ರಥ ಬರುತ್ತದೆ ನಮ್ಮ ಸರಕಾರ ಜಾರಿಗೊಳಿಸಿ ಅನುಷ್ಠಾನನಗೊಂಡ ಯೋಜನೆಗಳನ್ನು ಜನರಿಗೆ ವಿಡಿಯೋ ಮುಖಾಂತರ ತಲುಪಿಸುವ ಕಾರ್ಯವನ್ನು ಮಾಡುತ್ತದೆ ಎಂದರು. 

ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿಕಟ್ಟಿ. ನಿಕಟ ಪೂರ್ವ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಹಾಗೂ ಎಸ್ ಕೆ ಅಕ್ಕಿ, ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಬಸವರಾಜ ನಾರಾಯಣಪುರ, ಪ್ರಗತಿ ರಥ ಜಿಲ್ಲಾ ಸಂಚಾಲಕ ಪ್ರತೀಕ್ ಕೊಳೆಕರ್, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್ ಬ್ಯಾಹಟ್ಟಿ, ಕರಿಯಪ್ಪ ಕಟ್ಟಿಮನಿ, ಈರಣ್ಣಾ ಬಳಿಗಾರ, ಯಶೋದ ಪಾಟೀಲ್, ಪ್ರಕಾಶ ಧರಣಿಪ್ಪನವರ್, ಸುನೀಲ ಆರೆಕೊಪ್ಪ, ಪ್ರಭು ಮಾಸನಕಟ್ಟಿ, ಮೊಹಮ್ಮದ್ ಅಳ್ನಾವರ, ಶಶಿಕಾಂತ್, ಶಿವಾನಂದ ಸೊಬರದ ಹಾಗೂ ಅನೇಕ ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ