ರಾಣೇಬೆನ್ನೂರಲ್ಲಿ ಪಶುವೈದ್ಯಕೀಯ ಜಿಲ್ಲಾಮಟ್ಟದ ತಾಂತ್ರಿಕ ಕಾರ್ಯಗಾರ
ಲೋಕದರ್ಶನ ವರದಿ
ರಾಣೇಬೆನ್ನೂರು 08: ಹೊಸ ತಂತ್ರಜ್ಞಾನಗಳು ಹಾಗೂ ನವೀನ ಆವಿಷ್ಕಾರಗಳನ್ನು ಮೇಲಿಂದ ಮೇಲೆ ತಿಳಿದುಕೊಂಡರೆ ನಾವೆಲ್ಲರೂ ಈ ನಾಡಿನ ರೈತಸಮುದಾಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಲು ಸಾಧ್ಯವಾಗುವುದು ಎಂದು ಹಾವೇರಿ ಜಿಲ್ಲಾ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಚಿದಾನಂದ ಹೇಳಿದರು.
ಅವರು ಇಲ್ಲಿನ ತಾಲ್ಲೂಕಾ ಪಂಚಾಯ್ತಿ ಸಭಾ ಭವನದಲ್ಲಿ ಪಶುಪಾಲನಾ ಇಲಾಖೆಯು ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು ಮತ್ತು ಕಿರಿಯ ಪಶುವೈದ್ಯಕೀಯ ಪರೀಕ್ಷಕರಿಗಾಗಿ ನಡೆದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸ ಹೊಸ ವಿಷಯ ವಿಚಾರಗಳು ಮತ್ತು ತಂತ್ರಜ್ಞಾನ ಇವು ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತದೆ. ಅದರ ಬಗ್ಗೆ ನಾವು ನಿತ್ಯವು ಸೂಕ್ಷ್ಮವಾಗಿ ಅವಲೋಕಿಸಿ ನೀರೀಕ್ಷೆಯಲ್ಲಿಯೇ ವೃತ್ತಿಬದುಕು ಸಾಗಿಸಾಗಿದಾಗ ಮಾತ್ರ ಪರಿಪೂರ್ಣತೆ ಹೊಂದಿದಂತಾಗುತ್ತದೆ. ಅದಕ್ಕೆ ಪೂರಕವಾಗಿ ಇಂತಹ ಆವಿಸ್ಕಾರ ಕಾರ್ಯಾಗಾರಗಳು ಅವಶ್ಯ ಮತ್ತು ಅಗತ್ಯವಾಗಿವೆ. ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಅವರು ಮನುಷ್ಯ ಎಷ್ಟೇ ದೊಡ್ಡವರಿದ್ದರೂ ವೃತ್ತಿಯಲ್ಲಿ ಕಲಿಯುವುದು ಸಾಕಷ್ಟಿರುತ್ತದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಪಶುಪಾಲನಾ ಇಲಾಖೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸಮರ್ಕ ಅನುಷ್ಠಾನಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದರು.
ಇಲಾಖೆಯ ತಂತ್ರಾಂಶಗಳ ಕುರಿತು ಡಾ.ಪವನ ಬೆಳಕೇರಿ ಹಾಗೂ ಬರಡು ರಾಸುಗಳ ಕುರಿತು ಡಾ.ಮಹೇಶ ಕುಂಬಾರಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಹಾಯಕ ನಿರ್ದೇಶಕರಾದ ಡಾ.ಪರಮೇಶ ಎನ್. ಹುಬ್ಬಳ್ಳಿ, ಡಾ.ನೀಲಕಂಠ ಅಂಗಡಿ, ತಾಂತ್ರಿಕ ಅಧಿಕಾರಿ ಡಾ.ಕಿರಣ ಸೇರಿದಂತೆ ಇಲಾಖೆಯ ಮತ್ತಿತರ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ನೂರಕ್ಕೂ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ವೃತ್ತಿನೀರತ ನೌಕರರು ಪಾಲ್ಗೊಂಡಿದ್ದರು.