ರಾಷ್ಟ್ರೀಯ

ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢ

ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢ

ನವದೆಹಲಿ, ಸೆಪ್ಟೆಂಬರ್ 30: ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ತಗುಲಿದೆ. 

ಮಂಗಳವಾರ ಕೋವಿಡ್-19 ತಪಾಸಣೆಗೆ ಒಳಗಾದ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ಉಪ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. 

ವೆಂಕಯ್ಯ ನಾಯ್ಡು ಅವರಿಗೆ ಎ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಆತಂಕಪಡುವ ಅಗತ್ಯವಿಲ್ಲ.  ಅವರ ಆರೋಗ್ಯ ಉತ್ತ ಮವಾಗಿದೆ. ಮನೆಯಲ್ಲೇ  ಕ್ವಾರಂಟೈನ್‌ಗೆ  ಒಳಪಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. 

ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಗೆ ಸೋಂಕು ದೃಢಪಟ್ಟಿಲ್ಲ. ಆದರೂ ಅವರು ಪ್ರತ್ಯೇಕವಾಗಿ ಹೋಂ ಕ್ವಾರಂಟೀನ್ ಗೆ ಒಳಗಾಗಿದ್ದಾರೆ.

ಸುದ್ದಿ ಓದಿ