ಶಿಗ್ಗಾವ್

ಸ್ವದೇಶಿಗರ ಆರೋಗ್ಯದ ಬಗ್ಗೆ ನಿಷ್ಕಾಳಜಿ: ಹಾವೇರಿ ಕಳವಳ

ಸ್ವದೇಶಿಗರ ಆರೋಗ್ಯದ ಬಗ್ಗೆ ನಿಷ್ಕಾಳಜಿ: ಹಾವೇರಿ ಕಳವಳ

ಶಿಗ್ಗಾವಿ 12: ವಿದೇಶಿಗರು ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ಸವಿಯುತ್ತಾ ಹೋಗಿ ಅವರ ಆಯುಷ್ಯನ್ನು ವೃದ್ದಿಸಿಕೊಂಡರೆ ಸ್ವದೇಶಿಗರು ಹೆಚ್ಚು ಹೆಚ್ಚು ಜಿಂಕ ಪದಾರ್ಥ, ಮಾಂಸಹಾರಿ ಮತ್ತು ಬೇಕರಿ ಪದಾರ್ಥಗಳ ಸೇವನೆ ಮಾಡಿ ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಸ್‌.ಹೆಚ್‌.ಹಾವೇರಿ ಕಳವಳ ವ್ಯಕ್ತಪಡಿಸಿದರು. 

ಪಟ್ಟಣದ ಚೆನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿ ವಿಧ್ಯಾರ್ಥಿಗಳಿಂದ ತರಕಾರಿ ಮೇಳ ಮತ್ತು ಸವಿರುಚಿ ಸ್ಪರ್ಧೆ ಮತ್ತು 8 ನೇ ತರಗತಿ ವಿಧ್ಯಾರ್ಥಿಗಳಿಂದ ಗಿಡ ನೇಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಸಿರು ತರಕಾರಿಗಳನ್ನು ತಿನ್ನುವುದರಿಂದ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡಬಹುದು ಅಲ್ಲದೇ ತರಕಾರಿಗಳಲ್ಲಿ ಹೆಚ್ಚು ಹೆಚ್ಚು  ಜೀವಸತ್ವ ಮತ್ತು ಖನಿಜಗಳನ್ನು ಹೊಂದಿರುತ್ತವೆ ಹಾಗೂ ಹೆಚ್ಚು ಹೆಚ್ಚು ಗಿಡಗಳನ್ನು ನೇಡುವುದರಿಂದ ಉತ್ತಮವಾದ ಆಮ್ಲಜನಕವನ್ನು ಪಡೆಯಬಹುದು ಎಂದರು. 

ಶಿಕ್ಷಕಿ ರೇಣುಕಾ ಅಂಗಡಿ ಮಾತನಾಡಿ ಹೆಚ್ಚು ಹೆಚ್ಚು ಹಸಿರು  ತರಕಾರಿ, ಹಣ್ಣು, ಹಂಪಲಗಳು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದು ಎಂದರು. 

ಶಿಕ್ಷಕ ಮಾರುತಿ ಲಮಾಣಿ ಮಾತನಾಡಿ ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ನಮ್ಮ ಆಯುಷ್ಯನ್ನು ವೃದ್ದಿಸಿಕೊಳ್ಳಬಹುದು ಮತ್ತು ದೇಹದ ಸಮತೋಲನವನ್ನು ಕಾಪಾಡಬಹುದು ಎಂದರು.

ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಸುಮಾರು 50 ವಿವಿಧ ತಳೀಯ ಸಸಿಗಳನ್ನು ನೇಡುವುದರ ಮುಖಾಂತರ ಚೆನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯನ್ನು ಹಸಿರುಮಯ ಮಾಡಲು ಸಂಕಲ್ಪ ಮಾಡಲಾಯಿತು. 

ಮುಖ್ಯೋಪಾಧ್ಯಾಯ ಎಸ್‌.ಹೆಚ್‌.ಹಾವೇರಿ. 

ಶಿಕ್ಷಕಿ ಮಂಜುಳಾ ಪಾಟೀಲ ಪ್ರಾಸ್ತಾವಿಕವಾಗಿ, ಶೇಖರ ಪರಸಾಪೂರ, ಅಶ್ವಿನಿ ಕೆ, ಹಾಗೂ ವಿಧ್ಯಾರ್ಥಿಗಳು ತರಕಾರಿಗಳ ಮಹತ್ವದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿಧ್ಯಾರ್ಥಿಗಳು ತರಕಾರಿ ವೇಷಬೂಷಣ ಧರಿಸಿ ತಮ್ಮ ಪರಿಚಯ ಮಾಡಿಕೊಂಡರು. ಹಾಗೂ ವಿಧ್ಯಾರ್ಥಿಗಳು ರುಚಿ ರುಚಿಯಾದ ಅಡಿಗೆಗಳನ್ನು ತಯಾರಿಸಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ವಿಶೇಷವಾಗಿತ್ತು. 

ಸವಿರುಚಿ ಸ್ಪರ್ದೆ ವಿಜೇತರು ಬಸನಗೌಡ ಪಾಟೀಲ, ಈಶ್ವರಿ ಗೋಟಗೋಡಿ, ಅಭಿಲಾಷ ದೇವಣ್ಣವರ, ವಿಧ್ಯಾ ಸಿಖ್ ವಿಜೇತರಿಗೆ ಮುಖ್ಯೋಪಾಧ್ಯಾಯ ಎಸ್‌.ಹೆಚ್‌.ಹಾವೇರಿ ಪ್ರಶಸ್ತಿ ಪ್ರಧಾನ ಮಾಡಿದರು. 

ಈ ಸಂದರ್ಭದಲ್ಲಿ ವಿಧ್ಯಾ ಹೆಸರೂರ, ಭಾರತೀ ಶಿವಲೋಚನಮಠ, ಗೀತಾ ಪಟ್ಟಣಶೆಟ್ಟಿ, ಲಾವಣ್ಯ, ಸುನೀಲ ಮ್ಯಾಗೇರಿ ಸೇರಿದಂತೆ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ವಾಗತವನ್ನು ಮಂಜುಳಾ.ಪಿ.ಬಿ, ವಂದನಾರೆ​‍್ಣ ಶೃತಿ ನವರತ್ನ, ಗಾಯತ್ರಿ ದೈವಜ್ಞ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ