ಶಿಗ್ಗಾವ್

ವೀರರಾಣಿ ಕಿತ್ತೂರ ಚೆನ್ನಮ್ಮ ವಿಜಯೋತ್ಸವದ ಮೆರವಣಿಗೆ ಸಭಾ ಕಾರ್ಯಕ್ರಮ

ವೀರರಾಣಿ ಕಿತ್ತೂರ ಚೆನ್ನಮ್ಮ ವಿಜಯೋತ್ಸವದ ಮೆರವಣಿಗೆ ಸಭಾ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ : ತಾಲೂಕ ಆಡಳಿತ ಶಿಗ್ಗಾವಿ ವತಿಯಿಂದ ವೀರರಾಣಿ ಕಿತ್ತೂರ ಚೆನ್ನಮ್ಮ ವಿಜಯೋತ್ಸವದ ಮೆರವಣಿಗೆ ಕಾರ್ಯಕ್ರಮ ದಿ 30 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗುವುದು ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ಶರೀಫ ಭವನ ಸಂತೆ ಮೈದಾನದಲ್ಲಿ ನೇರವೇರುವುದು. 

ಈ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೌರವ ಉಪಸ್ಥಿತಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ,  ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಗೌರವ್ಹಾನಿತ ಅತಿಥಿ ಉಪ ಸಭಾಪತಿ ರುದ್ರಪ್ಪ ಲಮಾಣಿ, ಮುಖ್ಯ ಸಚೇತಕ ಸಲೀಂ ಅಹ್ಮದ, ವಿಧಾನ ಪರಿಷತ ಸದಸ್ಯ ಎಸ್.ವ್ಹಿ.ಸಂಕನೂರ, ಪ್ರದೀಪ ಶೆಟ್ಟರ, ಸಮಾಜದ ಅಧ್ಯಕ್ಷರಾದ ವಿರೇಶ ಆಜೂರ, ಶಿವಾನಂದ ಬಾಗೂರ, ಉಪನ್ಯಾಸ ಯ.ರು.ಪಾಟೀಲ ಸೇರಿದಂತೆ ಶಿಗ್ಗಾವಿ, ಬಂಕಾಪೂರ ಪುರಸಭೆ ಸರ್ವಸದಸ್ಯರು, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರು ವ ಉಪಾಧ್ಯಕ್ಷರು ವ ಸರ್ವಸದಸ್ಯರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಾಯಕರು, ಕಾರ್ಯಕರ್ತರು, ಎಲ್ಲಾ ಸಮಾಜದ ಅಧ್ಯಕ್ಷರು ವ ಸರ್ವ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ವ ಉಪಾಧ್ಯಕ್ಷರು ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ಅಧಿಕಾರಿಗಳು, ನೌಕರರು, ಸಾಹಿತಿಗಳು, ಕಲಾವಿದರು ಸೇರಿದಂತೆ ಸಮಸ್ತ ಸಾರ್ವಜನಿಕರು ಉಪಸ್ಥಿತರಿರುವರೆಂದು ಪ್ರಕಟಣೆಗೆ ಕೋರಿದ್ದಾರೆ.

ಸುದ್ದಿ ಓದಿ