ನೂತನ ಅಧ್ಯಕ್ಷರಾಗಿ ವೀರನಗೌಡ, ಉಪಾಧ್ಯಕ್ಷರಾಗಿ ಜೈರಾಬಿ ಆಯ್ಕೆ
ಬೈಲಹೊಂಗಲ ೦೪: ತಾಲೂಕಿನ ದೇವಲಾಪೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ವೀರನಗೌಡ ದಾನಗೌಡ್ರ, ಉಪಾಧ್ಯಕ್ಷರಾಗಿ ಜೈರಾಬಿ ನದಾಫ ಆಯ್ಕೆಯಾಗಿದ್ದಾರೆ.
ಬುಧವಾರದಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಜೈರಾಬಿ ನದಾಫ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೋಲಕಾರ ಹಾಗೂ ಪಿ.ಡಿ.ಒ ದೊಡ್ಡನಾಯ್ಕ ರಾಯನಾಯ್ಕರ ಘೋಷಿಸಿದರು.
ತಾ.ಪಂ. ಸದಸ್ಯ ಉಮೇಶಗೌಡ ಪಾಟೀಲ, ಮಾಜಿ ಸದಸ್ಯ ಸುಬುದ್ದಿಸ್ವಾಮಿ ರುದ್ರಾಪೂರ, ಗಣ್ಯರಾದ ರಾಮಲಿಂಗಪ್ಪ ಯರಗಟ್ಟಿ, ಗಂಗನಗೌಡ ಪಾಟೀಲ, ಚಂದ್ರಪ್ಪ ಹಣ್ಣಿಕೇರಿ, ತಮ್ಮನಗೌಡ ಪಾಟೀಲ, ಅರ್ಜುನ ನಾಯ್ಕರ, ನಾಗಪ್ಪ ಕೇಂದ್ರಿ, ಯಲ್ಲಪ್ಪ ಹಿರೇಬಿಳ, ಶಂಕರಗೌಡ ಪಾಟೀಲ ಸೇರಿದಂತೆ ಗ್ರಾಮದ ಗಣ್ಯರು ಹಿರಿಯರು ಈ ಸಂದರ್ಭದಲ್ಲಿ ಇದ್ದರು.