ಸಾರೋಟೋತ್ಸವಕ್ಕೆ ಮೆರಗು ನೀಡಿದ ವೀರಗಾಸೆ ಕಲಾತಂಡ
ರಾಣೇಬೆನ್ನೂರು 12: ತಾಲೂಕಿನ ಸುಕ್ಷೇತ್ರ ಕೋಡಿಯಾಲ ಹೊಸಪೇಟೆ ಬಾಲಯೋಗಿ ಜಗದೀಶ್ವರ ಮಹಾಸ್ವಾಮಿಗಳವರ ಪುಣ್ಯಕೋಟಿ ಮಠದ ಆವರಣದಲ್ಲಿ ಇತ್ತೀಚಿಗೆ ಬೃಹತ್ ತುಂಗಾರತಿ ಧಾರ್ಮಿಕ ಸಮಾರಂಭವು ನಡೆಯಿತು. ಸಮಾರಂಭಕ್ಕೂ ಮುನ್ನ ಹರಿಹರದ ಲಿಂಗೇಶ್ವರ ದೇವಸ್ಥಾನದಿಂದ ಬಾಳೇಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಸಾರೋಟೋತ್ಸವ ಮೆರವಣಿಗೆ ನಡೆಯಿತು.
ನಾಡಿನ ಇತಿಹಾಸ ಪ್ರಸಿದ್ಧ ಕುಪ್ಪೇಲೂರು ಗ್ರಾಮದ ವೀರಭದ್ರೇಶ್ವರ ವೀರಗಾಸೆ ಕಲಾ ತಂಡದ ಹಿರಿಯ ಕಲಾವಿದ ಬಸವರಾಜ ಕಡೇಮನಿ ಅವರ ತಂಡದ ಸಮಾಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಪ್ರದರ್ಶನ ನಡೆಯಿತು, ಮೆರವಣಿಗೆಗೆ ವಿಶೇಷ ಮೆರಗನ್ನು ತಂಡವು ನೀಡಿತ್ತು.