ಚಿಕ್ಕೋಡಿ

ವಿಜೃಂಭಣೆಯಿಂದ ವೀರಭದ್ರೇಶ್ವರ ರಥೋತ್ಸವ: ಬೆಳ್ಳಿತೇರು ಎಳೆದ ಮಹಿಳೆಯರು

ವಿಜೃಂಭಣೆಯಿಂದ ವೀರಭದ್ರೇಶ್ವರ ರಥೋತ್ಸವ: ಬೆಳ್ಳಿತೇರು ಎಳೆದ ಮಹಿಳೆಯರು

ಯಡೂರ ವೀರಭದ್ರೇಶ್ವರ-ಭದ್ರಕಾಳೇಶ್ವರಿ ಕಲ್ಯಾಣ ಮಹೋತ್ಸವ  

ಮಾಂಜರಿ 28: ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ-ಭದ್ರಕಾಳೇಶ್ವರಿ ಕಲ್ಯಾಣ ಮಹೋತ್ಸವ ಅಂಗವಾಗಿ ಮಹಿಳೆಯರಿಂದ ವೀರಭದ್ರೇಶ್ವರ ಬೆಳ್ಳಿ ರಥೋತ್ಸವ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ಜರುಗಿತು. 

ಬೆಳ್ಳಿ ರಥೋತ್ಸವಕ್ಕೆ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಚಾಲನೆ ನೀಡಿದರು. ಕೊಟ್ಟುರಿನ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಜಿಗಳು, ಶಹಾಪುರದ ಸುಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶಗಳ ಸಮ್ಮುಖದಲ್ಲಿ ಮಂಗಳವಾರ ಜರುಗಿತು.  

ಈ ಬೆಳ್ಳಿ ರಥೋತ್ಸವವನ್ನು ಎಳೆಯಲು ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ರಥೋತ್ಸವ ಪ್ರಾರಂಭವಾಗುತ್ತಿದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಥವನ್ನುಎಳೆಯಲು ಮಹಿಳೆಯರು ನಾ ಮುಂದೆ ನೀ ಮುಂದೆ ಎನ್ನುತ್ತಾ ಅತ್ಯಂತ ಭಕ್ತಿಭಾವದಿಂದ ರಥವನ್ನು ಎಳೆದರು. ರಥೋತ್ಸವದಲ್ಲಿ ವೀರಭದ್ರೇಶ್ವರ ಮಹಾರಾಜ್ ಕೀ ಜೈ ಎನ್ನುವ ಘೋಷಣೆಯು ಮಹಿಳೆಯರಿಂದ ಮೊಳಗಿದವು. ಸಕಲ ವಾದ್ಯಮೇಳ, ಕುದುರೆ ರಥೋತ್ಸವದುದ್ದಕ್ಕೂ ಗಮನ ಸೆಳೆದವು. 

ಭಕ್ತರು ರಥಕ್ಕೆ ಅತ್ಯಂತ ಭಕ್ತಿ ಭಾವದಿಂದ ಕೊಬ್ಬರಿ, ಖಾರಿಕ್, ಸಕ್ಕರೆ, ಬಾಳೆಹಣ್ಣುಗಳನ್ನು ಅರ​‍್ಿಸಿದರು. ರಥೋತ್ಸವವು ಕಾಡಸಿದ್ದೇಶ್ವರ ಮಠದಿಂದ ಪ್ರಾರಂಭವಾಗಿ ವೀರಭದೇಶ್ವರ ದೇವಸ್ಥಾನ, ಚೆನ್ನಮ್ಮ ವೃತ್ತ, ಹಳೆ ಯಡೂರಿನ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ಮತ್ತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು. ಈ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ