ರಾಣೆಬೆನ್ನೂರ

ಆಂಜನೇಯ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಆಂಜನೇಯ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಲೋಕದರ್ಶನ ವರದಿ 

ರಾಣಿಬೆನ್ನೂರ 06:  ತಾಲೂಕಿನ ಮಾಕನೂರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವರ ರಥೋತ್ಸವವು ರಾಮ ರಾಮ ಗೋವಿಂದಾ ಗೋವಿಂದ ಎಂಬ ಭಕ್ತಿಯ ವೇದಘೋಷದೊಂದಿಗೆ ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಸರಳವಾಗಿ ಶನಿವಾರ ನೆರವೇರಿತು. 

  ಬೆಳಿಗ್ಗೆಯಿಂದಲೇ ಆಂಜನೇಯ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಭಕ್ತರ ಮಧ್ಯೆ ಅರ್ಥಪೂರ್ಣವಾಗಿ ರಥೋತ್ಸವವು ಸರಳವಾಗಿ ಜರುಗಿತು. ರಥೋತ್ಸವದುದ್ದಕ್ಕೂ ನಂದಿಕೋಲು ಕುಣಿತ, ಭಜನೆ, ಡೊಳ್ಳು, ಸಮ್ಮಾಳ ಸೇರಿದಂತೆ ವಿವಿಧ ಮಂಗಳವಾಧ್ಯಗಳೊಂದಿಗೆ ನೆರವೇರಿತು. 

  ಆಂಜನೇಯ ದೇವಸ್ಥಾನದಿಂದ ಹೊರಟ ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ಹಣ್ಣು ಕಾಯಿ ಸಲ್ಲಿಸುವ ಮೂಲಕ ಭಕ್ತಿ ಸಮರ​‍್ಿಸಿದರು. ರಥೋತ್ಸವವು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತಲುಪಿತು. 


ಸುದ್ದಿ ಓದಿ