ಜು. 22ರಂದು ಡಾ. ಮಗದುಮ್ಮ ಅವರ ಹುಟ್ಟು ಹಬ್ಬದ ನಿಮಿತ್ಯ ವಿವಿದ ಕಾರ್ಯಕ್ರಮಗಳು
ಮಾಂಜರಿ, 16 ; ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಎ.ಮಗದುಮ್ಮ ಅವರ 68ನೇ ಹುಟ್ಟು ಹಬ್ಬದ ನಿಮಿತ್ಯ ಜು.22 ರಂದು ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುರೇಶ ಚೌಗುಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 9ಕ್ಕೆ ಆಶೀರ್ವಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಣೆ ಮಾಡಲಾಗುವುದು. ನಂತರ ಡಾ. ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಿಂದ 68 ಬಗೆಯ ಓಷಧಿ ಸಸಿಗಳನ್ನು ನೆಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಂತರ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಡಾ. ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಿಂದ ವರ್ಷ ಪೂರ್ತಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಪಂಚಕರ್ಮ ಕ್ರಿಯೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಉಚಿತ ಓಷಧಿಯನ್ನು ವಿತರಣೆ ಮಾಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ಮಾಡುವ ಪ್ರಸಂಗ ಬಂದಲ್ಲಿ ಶೇ. 50 ರಷ್ಟು ರಿಯಾಯತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಶಿಬಿರದ ಲಾಭವನ್ನು ಈ ಭಾಗದ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು. ನಂತರ ಡಾ. ಎನ್.ಎ.ಮಗದುಮ್ಮ ಅವರ 68ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಲಕ್ಷೇಶ್ವರದ ಚಂದನಾ ಶಾಲೆಯ ಅಧ್ಯಕ್ಷ ಟಿ.ಈಶ್ವರ ಆಗಮಿಸುವರು ಎಂದು ಹೇಳಿದರು.
ಡಾ. ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಸನ್ ಸವಣೂರ, ಪ್ರಾಚಾರ್ಯ ವರ್ಷಾ ಥೋರಾತ, ಎನ್.ಎಸ್.ನಿಡಗುಂದೆ ಸಿದ್ದಾರೂಢ ಪ್ರಭುನಟ್ಟಿ, ರಾಮಗೊಂಡ ಪಾಟೀಲ, ಯಾಕೂಬ ತಾಂಬಟ ಉಪಸ್ಥಿತರಿದ್ದರು.