ವನಸಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ: ಗಾಂಧಿಜೀ, ನೆಹರು ಜಯಂತ್ಯೋತ್ಸವ
ಲೋಕದರ್ಶನ ವರದಿ
ರಾಣೇಬೆನ್ನೂರು 06: ಕೂಲಿ ಕಾರ್ಮಿಕರಿಗಾಗಿ ನಿರಂತರ ಜೀವನ ಬದುಕನ್ನು ಕಟ್ಟಿಕೂಳ್ಳಲು ಉದ್ಯೂಗ ಖಾತ್ರಿ ಯೋಜನೆಯಲ್ಲಿ ಹಲವು ರೀತಿಯಲ್ಲಿ ಅವಕಾಶಗಳು ದೂರಕುತ್ತಲಿವೆ ಕೂಲಿ ಕಾರ್ಮಿಕರು ಯೋಜನೆಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೂಂಡು ಬದುಕನ್ನು ಕಟ್ಟಿಕೂಳ್ಳಲು ಮುಂದಾಗಬೇಕು ಎಂದು ವನಸಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮುಖ್ಯಾಧಿಕಾರಿ ಎಸ್.ಡಿ.ಬಳಿಗಾರ ಹೇಳಿದರು.
ಅವರು ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಜೀ ಅವರ ಜಯಂತೋತ್ಸವದ ನಿಮಿತ್ತ ಮಹಾತ್ಮಾ ಗಾಂಧಿಜೀ ಕಟ್ಟಡ ಹಾಗೂ ಇತರೆ ಕೂಲಿ ಕಾರ್ಮಿಕರ ಸಂಘಟನೆಗಳು ವನಸಿರಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದರು.
100 ದಿನಗಳ ಕೆಲಸ ಮುಗಿದ ಮೇಲೆ ಕಾರ್ಮಿಕರಿಗೆ ಕೆಲಸ ಬೇಕಾಗುತ್ತೆ ಮತ್ತು ರೈತರಿಗೂ ಕಾರ್ಮಿಕರ ಸೇವೆ ಇಂದು ಅಗತ್ಯವಿದೆ ಇದನ್ನು ಗಮನಿಸಿರುವ ವನಸಿರಿ ಸಂಸ್ಥೆಯು ಲೆಬರ್ ಬ್ಯಾಂಕ್ ಸ್ಥಾಪಿಸಿ ಇದಕ್ಕೆ ಆಪ್ ಅಭಿವೃದ್ದಿಪಡಿಸಿ ಕಾರ್ಮಿಕರಿಗೆ ನಿರಂತರ ಕೆಲಸ ಸಿಗುವ ನಿಟ್ಟಿನಲ್ಲಿ ಕಾರ್ಯನ್ಮೂಖವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕೂಲಿ ಕಾರರ ಸಂಘಟನೆಯ ಅಧ್ಯಕ್ಷ ಶಂಕರಯ್ಯ ಕಳಸೂರಮಠ ಅವರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅಸಂಗಟಿತ ಕೂಲಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪೆನಸನ್ ಯೋಜನೆಯನ್ನು ಜಾರಿಗೆ ತರಬೇಕು ಕನಿಷ್ಟ 8 ಸಾವಿರ ರೂ ಗಳ ಯೋಜನೆ ಜಾರಿ ಇದಾಗಬೇಕು ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು ವೇತನವನ್ನು 400 ರೂ. ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಡಗಿ, ಹಿರೇಕೆರೂರ, ರಾಣೇಬೆನ್ನೂರ ಸೇರಿದಂತೆ ಮತ್ತಿತರೆ ತಾಲೂಕುಗಳಿಂದ ನೂರಾರು ಕಾರ್ಮಿಕರು ಪಾಲ್ಗೂಂಡಿದ್ದರು. ಮಂಜುನಾಥ ಬಿದರಿ, ರಮೇಶ ಸುಂಕದ, ನಾಗಮ್ಮ, ಹನುಮಂತಪ್ಪ ಬ್ಯಾಡಗಿ, ಮಂಜಪ್ಪ, ಮತ್ತಿತರರು ಉಪಸ್ಥಿತರಿದ್ದರು.