ತಾಳಿಕೋಟಿ

ಜುಲೈ 7 ರಂದು ವನಮಹೋತ್ಸವ ಕಾರ್ಯಕ್ರಮ

ಜುಲೈ 7 ರಂದು ವನಮಹೋತ್ಸವ ಕಾರ್ಯಕ್ರಮ

ತಾಳಿಕೋಟಿ: ಸಾಮಾಜಿಕ, ಪ್ರಾದೇಶಿಕ ಅರಣ್ಯವಲಯ, ಕೆ.ಬಿ.ಜೆ.ಎನ್‌.ಎಲ್‌. ಆಲಮಟ್ಟಿ, ಪುರಸಭೆ, ಹಸಿರು ಸಂಪದ ಬಳಗ ತಾಳಿಕೋಟಿ ಹಾಗೂ ಸರಕಾರಿ ಉರ್ದು ಪ್ರಾಥಮಿಕ ಶಾಲೆ ಟಿಪ್ಪುನಗರ ಇವರ ಸಹಯೋಗದಲ್ಲಿ ಜುಲೈ 7 ರಂದು ‘ವನಮಹೋತ್ಸವ’ ಕಾರ್ಯಕ್ರಮ ನಡೆಯಲಿದೆ. 

ಅಂದು ಬೆಳಿಗ್ಗೆ 7-30 ಗಂಟೆಗೆ ಟಿಪ್ಪುನಗರ ಉರ್ದು ಹಿರಿಯ  ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿರುವ ಈ ‘ವನಮಹೋತ್ಸವ’ ಕಾರ್ಯಕ್ರಮದಲ್ಲಿ ಸಸಿ ನೆಡುವುದು, ಪರಿಸರ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವುದು ಹಾಗೂ ಸಂರಕ್ಷಣೆ ಕುರಿತು ಜಾಗೃತಿ ಉಪನ್ಯಾಸ ನಡೆಯಲಿವೆ. 

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ, ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರು, ಸದಸ್ಯರು  ಹಾಗೂ ಸಾಮಾಜಿಕ, ಪ್ರಾದೇಶಿಕ ಅರಣ್ಯವಲಯ, ಕೆ.ಬಿ.ಜೆ.ಎನ್‌.ಎಲ್‌. ಆಲಮಟ್ಟಿ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಹಸಿರು ಸಂಪದ ಬಳಗ ತಾಳಿಕೋಟಿ ಸಂಚಾಲಕ ಎಸ್‌.ಎಸ್‌. ಗಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ