ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ
ಲೋಕದರ್ಶನ ವರದಿ
ಶಿಗ್ಗಾವಿ 06: ಇತ್ತೀಚಿನ ದಿನಗಳಲ್ಲಿ ಬುದ್ಧಿಜೀವಿಯಾದ ಮನುಷ್ಯನ ದುರ್ಬುದ್ಧಿಯಿಂದ ಗಿಡ-ಮರಗಳ ಮಾರಣ ಹೋಮ ಹೆಚ್ಚುತ್ತಿರುವುದರಿಂದ ಅರಣ್ಯ ಸಂಪತ್ತು ಇನ್ನಿಲ್ಲವಾಗುತ್ತಿದೆ ಎಂದು ದುಂಡಸಿ ಸಹಾಯಕ ವಲಯಾರಣ್ಯಾಧಿಕಾರಿ ಪಂಚಾಕ್ಷರಪ್ಪ ತೆಗ್ಗಿಹಳ್ಳಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಹೊಸೂರ್ ಸರಕಾರಿ ಪ್ರೌಢಶಾಲೆಯಲ್ಲಿ ದುಂಡಸಿ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವನಮಹೋತ್ಸವ ಪಾಲ್ಗೊಂಡು ಮಾತನಾಡಿದರು, ಇಂದು ಅರಣ್ಯ ಪ್ರದೇಶವು ಉತ್ತಮವಾಗಿ ಗಿಡಮರಗಳು ಬೆಳೆದಿದ್ದು ಅಲ್ಲದೆ ಸಾಕಷ್ಟು ಸಿಬ್ಬಂದಿ ವರ್ಗವನ್ನು ನಿಯೋಜನೆಯನ್ನು ಮಾಡುವದರ ಜೊತೆಗೆ ಸೂಕ್ತವಾದ ಕಾವಲವನ್ನು ಮಾರ್ಪಡಿಸಲಾಗಿದೆ ಇದಕ್ಕೆ ಸಾರ್ವಜನಿಕರ ಸಹಕಾರವು ಅವಶ್ಯವಾಗಿದೆ ಎಂದರು.
ಹೊಸೂರ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ದಾವಲಸಾಬ್ ಎಂ ಹುಬ್ಬಳ್ಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದವರು ಇತ್ತೀಚಿನ ದಿನಗಳಲ್ಲಿ ಗಿಡ-ಮರಗಳ ಮಾರಣ ಹೋಮ ಹೆಚ್ಚುತ್ತಿರುವುದರಿಂದ ಸತತ ಬರಗಾಲ ಎದುರಿಸುವ ದುಃಸ್ಥಿತಿ ಬಂದೋದಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಸಿಬ್ಬಂದಿಗಳಾದ ಎಂ.ಸಿ. ನದಾಫ್, ಮೋಹನ ಶಾಮನೂರ, ಭೀಮೇಶ ಕೆಳಗಿನಮನಿ, ಚನ್ನಬಸು ಪೂಜಾರಿ, ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ನರಸಿಂಹ ಕೋಮಾರ, ಭೀಮಣ್ಣ ಸುಣಗಾರ ಉಪಸ್ಥಿತರಿದ್ದರು