ವನಮಹೋತ್ಸವ ಆಚರಣೆ
ಮುಂಡಗೋಡ: ಕೇಂದ್ರ ಕಚೇರಿಯ ಆದೇಶದ ಮೇರೆಗೆ ಪ್ಲಾಂಟ್ ಎ ಲೈಫ್ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿನ ಭಾರತೀಯ ಜೀವ ವಿಮಾ ನಿಗಮದ ಶಾಖೆಯ ಆವರಣದಲ್ಲಿ ಶುಕ್ರವಾರ ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾಧಿಕಾರಿ ಈರೇಶ ಹರಿವಾಣ, ಪ್ರತಿನಿಧಿಗಳಾದ ಅಶೋಕ ಸೂರಣ್ಣನವರ, ಗುರುರಾಜ ಕಾಮತ, ಹನುಮಂತ ವಡ್ಡರ, ಶೋಭಾ ಕೊನೇರಿ, ಪ್ರೇಮಕುಮಾರ ಹಾಗೂ ಎಪಿಎಮ್ಸಿ ಸಿಬ್ಬಂದಿ ಉಪಸ್ಥಿತರಿದ್ದರು.