ತಾಳಿಕೋಟಿ

ಸಮಾಜಕ್ಕೆ ವಾಲ್ಮೀಕಿ ಕೊಡುಗೆ ಅಪಾರ : ರಾಮಲಿಂಗಯ್ಯ ಶ್ರೀ

ಸಮಾಜಕ್ಕೆ ವಾಲ್ಮೀಕಿ ಕೊಡುಗೆ ಅಪಾರ : ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ವಾಲ್ಮೀಕಿ ಎಂಬುದು ಜಾತಿ ಸೂಚಕವಲ್ಲ ವಾಲ್ಮೀಕಿ ಅರ್ಥ ಹುತ್ತಿನಿಂದ ಎದ್ದು ಬಂದವನುಎಂದಾಗಿದೆ. ರತ್ನಾಕರ ಎಂಬ ಸಾಮಾನ್ಯ ವ್ಯಕ್ತಿ ಕಠಿಣವಾದ ತಪಸ್ಸಿನ ಮೂಲಕ ಅಗಾಧ ಜ್ಞಾನವನ್ನು ಗಳಿಸಿ ಮಹಷರ್ಿ ವಾಲ್ಮೀಕಿಯಾದರು ಜಗತ್ತಿಗೆ ದಾರಿ ತೋರಿಸುವಂತಹ  ಮಹಾನ್ ಗ್ರಂಥ ರಾಮಾಯಣವನ್ನು ರಚಿಸಿದರು ಇಂತಹ  ಮಹಾನುಭಾವರ ಜಯಂತಿಗಳನ್ನು ಆಚರಿಸುವುದರ ಮೂಲಕ ಅವರನ್ನು ಸ್ಮರಿಸುವಂತಹ ಕೆಲಸ ಎಲ್ಲರೂ ಸೇರಿ ಮಾಡಬೇಕು ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಚಬನೂರು ಹಿರೇಮಠದ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ ನಾವದಗಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡ ಮಹಷರ್ಿ ವಾಲ್ಮೀಕಿ ಜಯಂತೋತ್ಸವದ ಸಮಾರಂಭದಲ್ಲಿ ಅವರು ಸಮ್ಮುಕವಹಿಸಿ ಮಾತನಾಡಿದರು.

 ಹುಟ್ಟು ಮುಖ್ಯವಲ್ಲ ಬದುಕು ಮುಖ್ಯವಾಗಿದೆ ಯಾರು ತಿಳಿದು ಬದುಕುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಯಾರು ತುಳಿದು ಬಾಳುತ್ತಾರೋ ಅವರು ನಾಶವಾಗುತ್ತಾರೆ ಮಹಾತ್ಮರು ನಮಗೆ ಅರಿತು ಬಾಳುವುದನ್ನು ಕಲಿಸಿಕೊಟ್ಟಿದ್ದಾರೆ ಅದನ್ನು ಅನುಸರಿಸುವ ಪ್ರಯತ್ನ ನಾವೆಲ್ಲರೂ ಮಾಡಬೇಕು ಎಂದರು. ನೇತೃತ್ವ ವಹಿಸಿದ ನಾವದಗಿಯ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಅವರು ತಮ್ಮ ಆಶೀರ್ವಚನದಲ್ಲಿ ಮಹಾಪುರುಷರು ನಮಗೆ ನಮ್ಮ ಜೀವನದ ಉದ್ದೇಶವನ್ನು ತಿಳಿಸಿ ಕೊಟ್ಟಿದ್ದಾರೆ ಅವರು ಮಾನವ ಸಮಾಜಕ್ಕೆ ಜಯವಾಗಲಿ ಎಂದರು ಜಾತಿವಾದವನ್ನು ಅವರು ವಿರೋಧಿಸಿದರು ಅಂತಹ ಮಹಾನುಭಾವರನ್ನು ನೆನಪಿಸುವಂಥ ಕೆಲಸ ಎಲ್ಲ ಸಮಾಜದಿಂದಲೂ ಆಗಬೇಕು.

ಈ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಬಂಧುಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ ಇತರ ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಇಂಥ ಅದ್ಭುತವಾದ ಕಾರ್ಯಕ್ರಮವನ್ನು ಮಾಡಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಕು.ಸಾಲವಾಡಗಿ ಅವರು ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಿಲ್ಲಬೇಕು ಅವರು ಇಡೀ ಸಮಾಜದ ಆಸ್ತಿಯಾಗಿದ್ದಾರೆ ಅವರೆಲ್ಲರೂ ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಮಹಷರ್ಿ ವಾಲ್ಮೀಕಿ ಅವರು ರಚಿಸಿದ ಮಹಾನ್ ಗ್ರಂಥ ರಾಮಾಯಣ ನಮ್ಮ ಬದುಕಿಗೆ ದಾರಿದೀಪವಾಗಿದೆ ವಾಲ್ಮೀಕಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರವನ್ನು ನೀಡಬೇಕು ನೀವೆಲ್ಲರೂ ನನ್ನ ಗೆಲುವಿನಲ್ಲಿ ಸಾಕಷ್ಟು ಸಹಕರಿಸಿದ್ದೀರಿ ನಿಮ್ಮ ಈ ಋಣವನ್ನು ತೀರಿಸುವ ಕೆಲಸ ನಾನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು.  ಮಹಾಂತ ಸ್ವಾಮಿಗಳು ವಾಲ್ಮೀಕಿ ಸಮಾಜದ ಯಾದಗಿರಿ ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ಪಾಟೀಲ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ವಕೀಲ ರಾಮು ನಾಯಕ ಗುರು ಹುಲ್ಕಲ್ ಅವರು ಮಾತನಾಡಿದರು.

 ಹಿಪ್ಪರಗಿ ಜಡಿ ಮಠದ ಪರಮಪೂಜ್ಯಶ್ರೀ ಜಡಿ ಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಖ್ಯಾತ ಸಂಗೀತ ಕಲಾವಿದರಾದ ಅಶೋಕ ರಾಜನಕೋಳೂರು ಗುರುಪಾದ ಬಿರಾದಾರ ತಬಲಾವಾದಕ ಪ್ರವೀಣ ಪತ್ತಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಕಲಿಕೇರಿ ಹಿರೇಮಠದ ಪೂಜ್ಯಶ್ರೀ ಸಿದ್ದರಾಮಯ್ಯ ಶಿವಾಚಾರ್ಯ ಸ್ವಾಮಿಗಳು ಸಾಸನೂರು ಹಿರೇಮಠದ ಶಂಕರಲಿಂಗ ಮಹಾಸ್ವಾಮಿಗಳು ವೇದಮೂತರ್ಿ ಗುರುಪಾದಯ್ಯ ಹಿರೇಮಠ ಬಿಜೆಪಿ ಮುಖಂಡ ಭೀಮನಗೌಡ ಪಾಟೀಲ. ಸಾಹೇಬಗೌಡ ಪಾಟೀಲ ಲಕ್ಕುಂಡಿ. ನಿಂಗಣ್ಣ ಹವಾಲ್ದಾರ. ಸಾಹೇಬ ಗೌಡ ಬಿರಾದರ. ಅಶೋಕ ಅಸ್ಕಿ .ವಾಲ್ಮೀಕಿ ಸಮಾಜದ ಅಧ್ಯಕ್ಷ ರಂಗನಾಥ ಮೂಡಲಗೇರಿ. ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ. ಗ್ರಾಪಂ ಸದಸ್ಯ ವೀರೇಶ ಪಾಟೀಲ .ಮಲಕನ ಗೌಡ ಪಾಟೀಲ. ರವಿ ಧಣಿ ದೇಶಮುಖ .ಪಿಡಿಒ ಅನಿಲ್ ಕಿರಣಗಿ .ತಾಪಂ ಮಾಜಿ ಅಧ್ಯಕ್ಷ ಗಂಗಣ್ಣ ಬಡಿಗೇರ. ಶಿಕ್ಷಕ ಸಾಹೇಬಗೌಡ ಬಿರಾದಾರ .ಡಾ. ವೆಂಕಟೇಶ ನಾಯಕ. ಸಂಗನಗೌಡ ಪಾಟೀಲ. ಬಾಪುಗೌಪಡ ಪಾಟೀಲ ಬಿ.ಎಸ್ . ಇಸಾಂಪೂರ. ಬಸನಗೌಡ ಸಂಕನಾಳ ಹನುಮಂತರಾಯ ಮೂಡಲಗೇರಿ ಪ್ರಭುಗೌಡ ಸಂಕನಾಳ ರುದ್ರಪ್ಪಣ್ಣ ಕೊಡಗಾನೂರು ಹಳ್ಳೆಪ್ಪಣ್ಣ ಹವಾಲ್ದಾರ ಮತ್ತಿತರರು ಇದ್ದರ 

ಸುದ್ದಿ ಓದಿ