ವಾಲ್ಮೀಕಿ ರಚಿಸಿದ ರಾಮಾಯಣ ಜಗತ್ತಿನಾದ್ಯಂತ ಅಪ್ರತಿಮ
ಕಂಪ್ಲಿ 17:. ಮಹಾಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ ಅಪ್ರತಿಮವಾಗಿದೆ. ನಾರದ ಮುನಿಗಳಿಂದ ಆಶ್ರಯ ಪಡೆದು, ವಾಲ್ಮೀಕಿ ಚರಿತ್ರೆ ಬರೆಯಲು ಸಾಧ್ಯವಾಗಿದೆ ಎಂದು ಗೃಹ ರಕ್ಷಕದಳದ ಘಟಕಾಧಿಕಾರಿ ಹೆಚ್.ಗಿರಿಧರ್ ಹೇಳಿದರು.
ಪಟ್ಟಣದ ಗೃಹ ರಕ್ಷಕದಳದ ಕಛೇರಿಯಲ್ಲಿ ಗುರುವಾರ ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಿದ ನಂತರ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶವಾಗುವ ಜತಗೆ ಮುಂದಿನ ಪೀಳಿಗೆಗೆ ತತ್ವಾದರ್ಶಗಳನ್ನು ಕೊಂಡೊಯ್ಯಬೇಕಾಗಿದೆ. ಇಲ್ಲಿನ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಕೆಎಂಎಸ್ಕೆ ಹೊನ್ನೂರವಲಿ, ಸೆಕ್ಷನ್ ಲೀಡರ್ಗಳಾದ ಕೆ.ಜಗದೀಶ, ಕೆ.ಸುರೇಶ ಸೇರಿದಂತೆ ಗೃಹ ರಕ್ಷಕದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.