ವಾಜಪೇಯಿಯವರ ಜೀವನ ಸಂಘರ್ಷಮಯ: ಸುರೇಶ್ ಪಾಟೀಲ್
ಮಾಂಜರಿ 25: ವಾಜಪೇಯಿಯವರ ಜೀವನ ಸಂಘರ್ಷಮಯವಾಗಿದ್ದು ಹಿಮಾಲಯಕ್ಕಿಂತ ದೊಡ್ಡದಾದ ಚರಿತ್ರೆಯನ್ನು ಹೊಂದಿದ ಮಹಾನಾಯಕ ಅಟಲಜಿ ಎಂದು ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುರೇಶ್ ಪಾಟೀಲ್ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಾಜಪೇಯಿಯವರ 99ನೇ ಜನ್ಮದಿನಾಚಾರಣೆ ಹಾಗೂ ಸುಶಾಸನ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಂಘದಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಗೂರುಜಿ ಅಟಲಜಿಯನ್ನು ಕರೆದು ನಿಮಗೆ ಸಂಘದ ಸೇವೆ ಸಾಕು ಇನ್ನು ಮುಂದೆ ಬೇರೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದಾಗ ನನ್ನಿಂದ ಏನಾದರು ಅಪಚಾರವಾಗಿದೆ ಎಂದು ಅಟಲಜಿ ಕೇಳಿದಾಗ, ಇಲ್ಲಾ ಇನ್ನು ಈ ರಾಷ್ಟ್ರದಲ್ಲಿ ರಾಜಕೀಯ ಜೀವನ ಪ್ರಾರಂಭಿಸಬೇಕು ಎಂದಾಗ ಸಾಮಾನ್ಯ ಅಧ್ಯಾಪಕನ ಮಗ ಅಟಲಜಿ ಪ್ರಪಂಚದಲ್ಲಿ ಪ್ರಸಿದ್ಧ ನಾಯಕನಾಗಿ ಹೊಹೊಮ್ಮಿರುವದು ಶ್ಲಾಘನೀಯ.
ಅವರಲ್ಲಿದ್ದ ದೃಢಸಂಕಲ್ಪ, ರಾಜನೀತಿ ಹಾಗೂ ದೂರ ದೃಷ್ಟಿಯಿಂದ ರಾಷ್ಟ್ರಕ್ಕೆ ಸಮರ್ಿತವಾದ ಜೀವನ ಅವರದ್ದಾಗಿತ್ತು. ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದ ಇವರು ಜನಸಂಘದ ಅಧ್ಯಕ್ಷರಾಗಿ ದೇಶಾದ್ಯಂತ ಸಂಚರಿಸಿ ತನು, ಮನ ಧನದಿಂದ ಪಕ್ಷ ಸಂಘಟಿಸಿದ ಸಂಘಟನಾ ಚತುರ ಅಟಲಜಿಯಾಗಿದ್ದರು. 1980 ರಲ್ಲಿ ಮರುನಾಮಕರಣಗೊಂಡ ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿ ಕಟ್ಟಿದ ರಾಜಕೀಯ ಪಾರ್ಟಿ ಇಂದು ಪ್ರಪಂಚದ ಅತ್ಯಂತ ದೊಡ್ಡದಾದ ಪಾರ್ಟಿಯಾಗಿ ಬೆಳದಿದೆ. ಅಟಲಜಿ ಒಬ್ಬ ಕವಿ, ಪತ್ರಕರ್ತ ಹಾಗೂ ಚಾಣಾಕ್ಷ ರಾಜಕಾರಣಿಯಾಗಿ ಷಾ ತಜ್ಞರಾಗಿದ್ದರು ಎಂದು ಸುರೇಶ್ ಪಾಟೀಲ್ ವೇಳೆ ಅಂಕಲಿಗ್ರಾಮ ಪಂಚಾಯಿತಿಯ ಸದಸ್ಯರಾದ ವಿವೇಕ್ ಕಮತೆ ಕಪಿಲ್ ಚಿವಟೆ ಅಭಿಷೇಕ್ ಕೋಟಿವಾಲೆ ಸಂಜಯ್ ಪೋತದಾರ ಹಾಗೂ ಇನ್ನಿತರರು ಹಾಜರಿದ್ದರು.