ವಾಸ್ತವ ವಿಷಯಗಳ ನಿರೂಪಣೆಯೇ ವಚನ : ಸಿ.ಕೊಟ್ರ್ಪ
ಬಳ್ಳಾರಿ 26: ಹನ್ನೆರಡನೇ ಶತಮಾನದ ಶಿವಶರಣರು ವಾಸ್ತವ ಜಗತ್ತಿನ ವಿಷಯಗಳನ್ನು ತಮ್ಮ ಅನುಭವದ ಮೂಸೆಯಲ್ಲಿ ಯರಕಹೊಯ್ದು ರಚಿಸಿದ ರಚನೆಗಳೇ ವಚನಗಳು. ವಚನಗಳಲ್ಲಿ ಬದುಕಿನ ಬವಣೆಗಳಿಗೆ ಪರಿಹಾರವಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಸಾಧನಗಳಾಗಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಸಿ.ಕೊಟ್ರ್ಪ ನುಡಿದರು.
ಬಳ್ಳಾರಿ ತಿಲಕ್ ನಗರದಲ್ಲಿಯ ಶ್ರೀ ಭವಾನಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 293ನೇ ಮಹಾಮನೆ ಲಿಂ. ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಪ್ರೊ.ಕೆ.ಬಿ.ಹನುಮಂತರಾಯರ ದತ್ತಿ ಕಾರ್ಯಕ್ರಮದಲ್ಲಿ "ವಚನ ಸಾಹಿತ್ಯದ ಬೆಳವಣಿಗೆ ಮತ್ತು ಶರಣರ ವಚನಗಳಲ್ಲಿ ಜೀವನ ಮೌಲ್ಯ" ವಿಷಯ ಕುರಿತು ಮಾತನಾಡುತ್ತಾ ಜೀವನದ ಪರಮ ಸತ್ಯವನ್ನು ಶರಣರು ತಮ್ಮ ಬದುಕಿನಲ್ಲಿ ಕಂಡು, ಲೋಕದಲ್ಲಿದ್ದೂ ಅಲೌಕಿಕವಾದ ಅನುಭೂತಿಯಲ್ಲಿ ಬದುಕಿದ್ದರು ಎಂದರು.
ಹರಗಿನಡೋಣಿಯ ಪಂಚವಣ್ಣಿಗಿ ಸಂಸ್ಥಾನ ಹಿರೇಮಠದ ಪೂಜ್ಯರಾದ ಷ. ಬ್ರ. ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ವೀರಭದ್ರನ ಪರಿಕಲ್ಪನೆಯನ್ನು ಕಲಾವಿದರು ತಮ್ಮ ಕಲೆಯ ಮೂಲಕ ವ್ಯಕ್ತಪಡಿಸಿರಿ. ಜೊತೆಗೆ ಗಣೇಶನ ಮೂವತ್ತೆರಡು ಅವತಾರಗಳನ್ನು ಚಿತ್ರಿಸಲು ತಿಳಿಸಿ, ಉತ್ತಮ ಕೃತಿಗೆ ನಗದು ಬಹುಮಾನ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಭವಾನಿ ಚಿತ್ರಕಲಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಆರ್.ಎಲ್.ಜಾಧವ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿ ಮಲ್ಲಿಕಾರ್ಜುನ ಪ್ರಾರ್ಥನೆ ಸಲ್ಲಿಸಿದರು. ಸುಲ್ತಾನ ಸ್ವಾಗತ ಕೋರಿದರು. ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ದಾನಿಗಳನ್ನು ಪರಿಚಯಿಸಿ, ಶರಣು ಸಮರೆ್ಣ ಮಾಡಿದರು. ವೇದಿಕೆಯ ಗಣ್ಯರನ್ನು ಸನ್ಮಾನಿಸಲಾಯಿತು. ಮಹಾ ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.