ರಾಣೆಬೆನ್ನೂರ

ಕರೋನಾ ರಕ್ಷಣೆಗೆ ಲಸಿಕೆ ರಾಮಬಾಣ: ಸುಭಾಸ್ ಸಾವಕಾರ

ಕರೋನಾ ರಕ್ಷಣೆಗೆ ಲಸಿಕೆ ರಾಮಬಾಣ: ಸುಭಾಸ್ ಸಾವಕಾರ

ರಾಣೀಬೆನ್ನೂರ 06:  ರೋಗ ನಿರೋಧಕ ಶಕ್ತಿ ಹೆಚ್ಚಳವಿದ್ದವರೂ ಸಹ ಕಳೆದ ಎರಡು ವರ್ಷಗಳಿಂದ ಕರೋನಾ ಸೋಂಕಿನಿಂದ ಬಳಲಿ ಸಾವನ್ನು ಕಂಡಿದ್ದನ್ನು ನೋಡಿದರೆ ಈ ಸೋಂಕು ರೋಗ ಎಷ್ಟೊಂದು ಪ್ರಬಲವಾಗಿದೆ ಎನ್ನುವುದನ್ನು ತಿಳಿಯಬಹುದು. ವಿಜ್ಞಾನಿಗಳು ಇದಕ್ಕೆ ಪ್ರತೀಕವಾಗಿ ಅತೀ ಶೀಘ್ರದಲ್ಲಿಯೇ ಕರೋನಾ ಸೋಂಕನ್ನು ಎದುರಿಸಲು ಕಂಡು ಹಿಡಿದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರಾಣೀಬೆನ್ನೂರ ತಾಲೂಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ್ ಸಾವಕಾರ ಹೇಳಿದರು. 

ಅವರು ಸೋಮವಾರ ವಿ ಕೆ ಸಾವಕಾರ ಸ್ಮಾರಕ ಭವನದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಎನ್‌ಎಸ್ ಎಸ್, ಎನ್‌ಸಿಸಿ, ಯುವ ರೆಡ್ ಕ್ರಾಸ್, ಐಕ್ಯುಎಸ್ ಘಟಕಗಳು ಆಯೋಜಿಸಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮಹಾಮಾರಿ ರೋಗದಿಂದ ರಾಜಧಾನಿಯಲ್ಲಿ ಸಾವು ಕಂಡ ಕುಟುಂಬದವರ ಆರ್ತನಾದ ಇಡೀ ವಿಶ್ವದ ಜನತೆ ಮಾಧ್ಯಮದ ಮೂಲಕ ಗಮನಿಸಿದ್ದಾರೆ. ನಾಡಿನ ಲಕ್ಷಾಂತರ ಜನರು ಇದರಿಂದ ತಮ್ಮ ಜೀವವನ್ನು ಕಳೆದುಕೊಂಡು ಕುಟುಂಬದವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಆ ಸಂದರ್ಭದಲ್ಲಿ ಸಕಾಲಕ್ಕೆ ಆಮ್ಲಜನಕ ಸಿಕ್ಕಿದ್ದರೆ ಇಷ್ಟೊಂದು ಸಾವು ಸಂಭವಿಸುತ್ತಿರಲಿಲ್ಲ ಯುವಕರು ಲಸಿಕೆ ಹಾಕಿಸಿಕೊಂಡು ಕರೋನಾ ರೋಗ ಮುಕ್ತವಾಗಿಸಲು ಮುಂದಾಗಬೇಕು ಎಂದು ಹೇಳಿದರು.  

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾಽಽ ಸಂತೋಷಕುಮಾರ ಅವರು  ತಾಲೂಕು ಮತ್ತು ಜಿಲ್ಲೆಯಲ್ಲಿ ಲಸಿಕೆ ಸಮರ್ಪಕವಾಗಿ ಪೂರೈಕೆಯಾಗುತ್ತಲಿದೆ. ಸರ್ಕಾರವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರೀಕರಿಗೂ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಲಭ್ಯವಿದೆ. ಯಾರೂ ಯಾವುದೇ ರೀತಿಯಲ್ಲಿ ಅಂಜದೇ ಅಳುಕದೇ ಯಾರೋ ನೀಡಿದ ತಪ್ಪು ಕಲ್ಪನೆಯ ಹೇಳಿಕೆಯನ್ನು ಗಮನಿಸದೇ ನೇರವಾಗಿ ನಿಗದಿತ ಸ್ಥಳದಲ್ಲಿ ಲಸಿಕೆಯನ್ನು ಪಡೆಯಲು ಮುಂದಾಗಬೇಕು ಎಂದ ಅವರು ಪ್ರಥಮ ಹಾಗೂ ದ್ವಿತೀಯ ಹಂತದ ಲಸಿಕೆಯನ್ನು ಹಾಕಿಸಿಕೊಂಡರೆ ಬಹುತೇಕವಾಗಿ ಕರೋನ ವೈರಸ್‌ನಿಂದ ಮುಕ್ತವಾಗಬಹುದಾಗಿದೆ ಎಂದು ಅವರು ವಿವರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕಾ ಸಮಿತಿಯ ಪ್ರೊ. ಅರುಣಕುಮಾರ ಚಂದನ್, ಎನ್‌ಎಸ್‌ಎಸ್ ಅಧಿಕಾರಿ ಡಾ. ಸರಸ್ವತಿ ಬೊಮ್ಮನಾಳ್, ಪ್ರೊ. ಸಿ ಎ ಹರಿಹರ, ಪ್ರಾಚಾರ್ಯ ಎಫ್‌.ಹೆಚ್‌.ಮಾಚೇನಹಳ್ಳಿ, ಡಾ. ಆರ್‌.ಎಸ್‌. ರಡ್ಡೇರ, ಡಾ. ಆರ್‌. ಮಧುಕುಮಾರ, ಎಸ್‌.ಎನ್ ಮುನ್ವರ್ ಅಲಿಖಾನ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಸುದ್ದಿ ಓದಿ