ರಾಷ್ಟ್ರೀಯ

ಕೋವಿಡ್ : ಉತ್ತರ ಪ್ರದೇಶ ಬಿಜೆಪಿ ಮುಖಂಡ ರಾಮ್ ಪಾಲ್ ಸಿಂಗ್ ಪುಂದಿರ್ ಸಾವು

ಕೋವಿಡ್ : ಉತ್ತರ ಪ್ರದೇಶ ಬಿಜೆಪಿ ಮುಖಂಡ ರಾಮ್ ಪಾಲ್ ಸಿಂಗ್ ಪುಂದಿರ್ ಸಾವು

ಸಹರಾನ್‍ ಪುರ, ಅಕ್ಟೋಬರ್ 07: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಸಹರಾನ್ ಪುರದ ಭಾರತೀಯ ಜನತಾ ಪಕ್ಷದ ಮುಖಂಡ ರಾಮ್ ಪಾಲ್ ಸಿಂಗ್ ಪುಂದಿರ್ ಬುಧವಾರ ಮೃತಪಟ್ಟಿದ್ದಾರೆ.  ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೂಲತಃ ದಿಯೋಬಂದ್ ಬಳಿಯ ಭೈಲಾ ಕಲಾನ್ ಗ್ರಾಮದವರಾದ ರಾಮ್ ಪಾಲ್ ಸಿಂಗ್ ಜಿಲ್ಲಾ ಸಂಚಾಲಕ ಮತ್ತು ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದರು. 

ರಾಮ್ ಪಾಲ್ ಸಿಂಗ್ ಪುಂದಿರ್ ಮತ್ತು ಅವರ ಪುತ್ರ ಶಾಂತನು ಪುಂದಿರ್ (20) ಅವರು ಮಂಗಳವಾರ ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರಲ್ಲಿಯೂ ಸೋಂಕು ದೃಢಪಟ್ಟಿತ್ತು. 

ನಂತರ ಅವರನ್ನು ಸಹರಾನ್‌ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಯಿತು. ಆದರೆ, ಪುಂದಿರ್ ಬುಧಬಾರ ಬೆಳಿಗ್ಗೆ ಐಸಿಯು ವಾರ್ಡ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ಓದಿ