ಕಥೆ ಮತ್ತು ವಿಶೇಷ ಲೇಖನಗಳು

ಮೊಬೈಲ್ ಬಳಕೆ ಮಾಡಿ ಅತಿಯಾದ ಬಳಕೆ ಬಿಡಿ

ಮೊಬೈಲ್ ಬಳಕೆ ಮಾಡಿ ಅತಿಯಾದ ಬಳಕೆ ಬಿಡಿ

-ಡಾ. ಹೇಮಾವತಿ ಸೊನ್ನೊಳ್ಳಿ , ಬೆಳಗಾವಿ 

ಚಿಂಟು ಆರನೇಯ ಇಯತ್ತೆಯಲ್ಲಿ ಓದುತ್ತಿದ್ದ. ಪ್ರತಿ ಪರೀಕ್ಷೆಯಲ್ಲಿ ಒಂದೋ ಅಥವಾ ಎರಡೋ ವಿಷಯಗಳಲ್ಲಿ ಫೆಲ್ ಆಗುತ್ತಿದ್ದ ಟೀಚರ್ ಪಾಲಕರನ್ನು ಕರೆಸಿ ಇವನು ಚೆನ್ನಾಗಿ ಓದುತ್ತಿಲ್ಲ ಓದಿಸಿ ಎನ್ನುತ್ತಿದ್ದರು. ಪಾಲಕರಿಗೆ ಮಗ ವಿದ್ಯಾಭ್ಯಾಸದಲ್ಲಿ ಹಿಂದುಳಿದೂದು ಕೇಳಿ ಬೇಸರವಾಗುತ್ತಿತ್ತು. ಚಿಂಟು ಓದು ಎಂದರೆ ಮೊಬೈಲ್ನಲ್ಲಿ ಗೇಮ್ಸ್ ಆಡುವುದರಲ್ಲೇ ಹೆಚ್ಚಿಗೆ ಹೊತ್ತು ಕಳೆಯುತ್ತಿದ್ದ. ಶಾಲೆಯಿಂದ ಬಂದ ಮೇಲೆ ಏನಾದರೂ ಸ್ವಲ್ಪ ಗಡಿಬಿಡಿಯಲ್ಲಿ ಹೊಟ್ಟೆಗೆ ತೆಗೆದುಕೊಂಡು ತಂದೆ  ತಾಯಿ ಮೊಬೈಲ್ ಮುಟ್ಟಿದ್ದರೆ ಅಥವಾ ಕೊಡದೇ ಇದ್ದರೆ ಮೊಂಡುತನ ಮಾಡಿ ಅತ್ತು ಕರೆದು ಮೊಬೈಲ್ ಪಡೆಯುತ್ತಿದ್ದ. ಇವನ ಈ ಮೊಬೈಲ್ ಗೀಳನ್ನು ಎಷ್ಟು ಪ್ರಯತ್ನಪಟ್ಟು ಬಿಡಿಸಲು ಹೋದರೂ ಅದು ನಿರರ್ಥಕವಾಗುತ್ತಿತ್ತು ಮೊಬೈಲ್ ಬಳಸಿ ಬಳಸಿ ಕಣ್ಣುಗಳ ಮೇಲೆ ಹಾಗೂ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರುತ್ತಿತ್ತು. ಟೀಚರ್ ಮೊಬೈಲ್ನಲ್ಲಿ ಆಡ್ತಾ ಕುಳಿತುಕೊಳ್ಳಬೇಡ ಅಭ್ಯಾಸ ಮಾಡು ಎಂದು ಹೇಳಿದರೆ ಗೋಣು ಅಲ್ಲಾಡಿಸಿ ಬರುತ್ತಿದ್ದ ಮನೆಗೆ ಬಂದ ಮೇಲೆ ಮೊಬೈಲ್ ಬಿಟ್ಟು ಇರುತ್ತಲೇ ಇರಲಿಲ್ಲ. ಮೊಬೈಲ್ ಬಿಡಿ ಓದಿನ ಕಡೆಗೆ ಗಮನ ಕೊಡು ಎಂದು ಪಾಲಕರು ಬುದ್ಧಿ ಹೇಳಿದರೂ ಲಕ್ಷಕೊಡುತ್ತಿರಲಿಲ್ಲ. 

ಕಾಲೇಜ ವಿದ್ಯಾಥರ್ಿಗಳಂತೂ  ಮೊಬೈಲ್ ಕೊಡಿಸಿ ಕೊಡಿಸಿದರೇನೆ ಕಾಲೇಜಿಗೆ ಹೋಗುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು ಹಠಹಿಡಿದು ಕುಳಿತು ಬಿಡುತಾರೆ. ನಮಗೆ ಅಭ್ಯಾಸ ಮಾಡಲು ಅದು ಅವಶ್ಯಕ ಎಂದೆಲ್ಲ ಹೇಳುತ್ತಾರೆ. ಆದರೆ ಅದನ್ನು ಜ್ಞಾನರ್ಜನೆಗೆ ಬಳಸದೆ ಶೋಕಿಗಾಗಿ. ಹೊತ್ತುಗಳೆಯಲು. ವ್ಯಾಟ್ಸಾಪ್, ಫೇಸಬುಕ್ ಹೀಗೆ ತಮಗೆ  ಸದ್ಭಳಕೆಯಾಗದುದನ್ನು ನೋಡುತ್ತಾ ಸಮಯವನ್ನು ವ್ಯರ್ಥಗಳೆಯುತ್ತಾರೆ. ಕ್ಲಾಸಿನಲ್ಲಿ ಮೊಬೈಲ್ ತರಬೇಡಿರೆಂದರೂ ಕಲಿಕೆ ಕಡೆಗೆ ಲಕ್ಷಕೊಡದೇ ಗುರುಗಳು ಹಾಗೂ ಹೆತ್ತವರ ಮಾತು ಅಲಕ್ಷಿಸಿ ಕದ್ದುಮುಚ್ಚಿಯಾದರೂ ಉಪಯೋಗ ಮಾಡಿ ತಮ್ಮ ನಿಶ್ಚಿತ ಗುರಿಯೆಡೆಗೆ ಸಾಗುವ ದಿಕ್ಕಿನ ದಿಕ್ಕುಗೆಡಿಸಿಬಿಡುತ್ತಾರೆ. ಎಷ್ಟು ಬೇಕೋ ಅಷ್ಟೇ ಮೊಬೈಲ್ನ್ನು ಬಳಸದೇ ಮೊಬೈಲ್ನಲ್ಲೇ ಹೆಚ್ಚು ಹೊತ್ತು ಕಳೆಯುತ್ತಾ ಯುವಕರು ಸಮಯದ ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇದರಿಂದ ಅವರ ಪರಿಪೂರ್ಣ ವ್ಯಕ್ತಿತ್ವದ ವಿಕಾಸ ಆಗುತ್ತಿಲ್ಲ. ಅವರಿಗೆ ಮೊಬೈಲ್ ಬಳಕೆ ಬಗ್ಗೆ ಎಷ್ಟು ಉಪದೇಶ ಯಾರ ನೀಡಿದರೂ ಕೊಡವನ್ನು ಡಬ್ಬಿಹಾಕಿ ನೀರು ಸುರುವಿದಂತಾಗುತ್ತಿದೆ. 

ವಿವಿಧ ಕ್ಷೇತ್ರಗಳ್ಲಿ ದುಡಿಯುತ್ತಿರುವ ಪುರುಷರು ಹಾಘೂ ಮಹಿಳೆಯರು ಕರ್ತವ್ಯದ ಮೇಲಿದ್ದಾಗ ಮೊಬೈಲ್ ಬಳಕೆ ಮಾಡಬಾರದು ಎಂದಿದ್ದರು ಹೆಚ್ಚು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಇದರಿಂದ ಕರ್ತವ್ಯ ನಿಭಾಯಿಸುವಲ್ಲಿ ಅಡಚಣೆಯುಂಟಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹೆಣ್ಣು ಮಕ್ಕಳು ಮನಗೆಲಸ, ಪತಿ, ಮಕ್ಕಳು, ಮನೆಗೆ ಬಂದ ಅತಿಥಿಗಲು ಹೀಗೆ ಯಾವುದಕ್ಕೂ ಅಲಕ್ಷಮಾಡಿ ಮೊಬೈಲ್ ಉಪಯೋಗಿಸುವುದರಲ್ಲೇ ಮುಳುಗಿ ಬಿಡುತ್ತಾರೆ. ಮುಳುಗಿದವರನ್ನು ಎಚ್ಚರಿಸುವ ಪ್ರಯತ್ನ ಯಾರಾದರು ಪಟ್ಟರೆ ತಡಿರಿ ತಡಿರಿ ಆಯ್ತ ಐದೇ ನಿಮಿಷ ಅನ್ನುತ್ತಾ ಮತ್ತು ಮೊಬೈಲ್ನಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇದರಿಂಧ ಮನೆಯ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಆಗದೇ ಅಸ್ತವ್ಯಸ್ತತೆ ಉಂಟಾಗುತ್ತದೆ. 

ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಎಷ್ಟು ಸುರಕ್ಷಿತವಾದುದು ನೀವೆ ಹೇಳಿ? ತಲೆಬಗ್ಗಿಸಿ ಕಿವಿಗೆ ಮೊಬೈಲ್ ಹಚ್ಕೊಂಡು ಸ್ಚೇರಿಂಗ ಕೈಯಲ್ಲಿ ಹಿಡಿದು ವಾಹನ ಚಲಯಿಸುವುದನ್ನು ಹೆಚ್ಚಾಗಿ ನವು ಕಾಣುತ್ತೇವೆ. ಮೈಮೇಲೆಲ್ಲಾ ಲಕ್ಷವಿಟ್ಟು ಗಾಡಿ ಒಡಿಸಿದಾಗಲೇ ಎಷ್ಟೋ ಅಪಘಾತಗಳಾಗುತ್ತದೆ. ಇನ್ನೂ ಮೊಬೈಲ್ ಬಳಸುತ್ತಾ ಗಾಡಿ ಚಲಾಯಿಸುವುವಾಗ ನಿಶ್ಚಿತವಾಗಿಯೂ ಅಪಘಾತಗಲಾಗುತ್ತದೆ. 

ಇದರಿಂದ ಕೈಕಾಲು ಮುರಿದುಕೊಳ್ಳುವುದು. ಗಂಭೀರ ಸ್ವರುಪದ  ಪೆಟ್ಟು, ಪ್ರಾಣಪಕ್ಷಿ ಹಾರಿಹೋಗುವುದು ಇವೆಲ್ಲ ಸವರ್ೆಸಾಮಾನ್ಯವಾಗಿ ಬಿಟ್ಟೆವೆ. ಅಪಘಾತಕ್ಕೊಳಗಾದವರ ಪರಿಸ್ಥಿತಿ ನೆನೆಸಿಕೊಂಡರೆ ಭಯವಾಗುತ್ತದೆ. ಯಾವ ವೈರಿಗೂ ಬೇಡಪ್ಪಾ ಇಂಥ ಪರಿಸ್ಥಿತಿ ಎನಿಸುತ್ತದೆ. ಹೀಗೆ ಮೊಬೈಲ್ ಮೇಲೆ ಮಾತನಾಡುತ್ತಾ ಡ್ರೈವಿಂಗ ಮಾಡುವುದು ಒಳ್ಳೆಯದಲ್ಲವೇ ಅಲ್ಲ ತಿಳಿದುಕೊಳ್ಳಿ. ಇದನ್ನರಿತು ಕೂಡಾ ವಾಹನ ಚಲಾಯಿಸುವವರ ಮೊಬೈಲ್ಗೆ ಅಂಟಿಕೊಂಡೇ ಕುಳಿತಿರುತ್ತಾರೆ. 

ಇದೇಕೆ ಹೀಗೆ ಅಂತಾ? ಮೊಬೈಲ್ ವೈಜ್ಞಾನಿಕ ಕ್ಷೇತ್ರದ ಸತತ ಅದರ ಜೊತೆಗೇನೆ ಕಾಲಕಳೆಯುವುದು ವ್ಯರ್ಥಕಾಲಹರಣ, ಕಣ್ಣು ಕೆಡಿಸಿಕೊಳ್ಳುವುದು. ನಿದ್ರಾಹೀನತೆ, ಅನಾರೋಗ್ಯ ಇಂಥ ಸಮಸ್ಯೆಗಳು ಎದುರಾಗುತ್ತದೆ. ಅದರಿಂದ ಅರಿಯದ ಜ್ಞಾನವನ್ನು ಅರಿತುಕೊಳ್ಳಲು ನಿಮಗಿಷ್ಟು ಬೇಕೋ ಅಷ್ಟೇ ಉಪಯೋಗಿಸಿ. ವಿದ್ಯಾಥರ್ಿಗಳು ವಿದ್ಯಾರ್ಜನೆಗೆ ಗಮನ ನಿಡುವುದು ನಿಮ್ಮೆಲ್ಲರ ಮೊದಲ ಕರ್ತವ್ಯ ಯುವಕರೇ ನಿಮ್ಮ ಜೀವನವನ್ನು ಒಳ್ಳೆ ರೀತಿಯಿಂದ ರೂಪಿಸಿಕೊಳ್ಳಲು ಮೊಬೈಲ್ ಬಳಸಿ ಆದರೆ ಮೊಬೈಲ್ ಬಳಸುವುದೇ ನಿಮ್ಮ ಜೀವನವಾಗದಿರಲಿ, ಪುರುಷರಾಗಲಿ, ಮಹಿಳೆಯರಾಗಲಿ ನಿಮ್ಮ ನಿಮ್ಮ ಕರ್ತವ್ಯದೆಡೆಗೆ ಹೆಚ್ಚಿನ ಗಮನಹರಿಸಿ. ಮೊಬೈಲ್ ಮೇನ ಆಗದೆ ಅದು ಸೈಡ್ ಆಗಿರಲಿ, ಡ್ರೈವಿಂಗ್ನಲ್ಲಿ ತೊಡಗಿದವರು ತುತರ್ುಕರೆಗಳು ಬಂದರೆ ಮಾತ್ರ ವಾಹನವನ್ನು ಸ್ವಲ್ಪಹೊತ್ತು ಬದಿಗೆ ಹಚ್ಚಿ ನಿಲ್ಲಿಸಿ ಆ ಮೇಲೆ ಮಾತನಾಡಿ. ಅಷ್ಟು ಮಾಡಿದರೆ ನೀವೂ ಸುರಕ್ಷಿತ ನಿಮ್ಮನ್ನು ನಂಬಿ ಪ್ರಯಾಣಿಸುವರು ಸುರಕ್ಷಿತ ಯಾರೇ ಮೊಬೈಲ್ ಬಳಕೆ ಮಾಡಿ ಅತಿಯಾದ ಬಳಕೆ ಬಿಡಿ ಎಂಬುವುದೇ ನನ್ನ ಕಳಕಳಿಯ ವಿನಂತಿ. 


ಸುದ್ದಿ ಓದಿ