ಮನರಂಜನೆ

ಇನ್ ಸ್ಟಾಗ್ರಾಮ್ ನಲ್ಲಿ ಊರ್ವಶಿಗೆ ಮೂರು ಕೋಟಿ ಹಿಂಬಾಲಕರು

ಇನ್ ಸ್ಟಾಗ್ರಾಮ್ ನಲ್ಲಿ ಊರ್ವಶಿಗೆ ಮೂರು ಕೋಟಿ ಹಿಂಬಾಲಕರು

ಮುಂಬೈ, ಆಗುಸ್ಟ್.27: ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ಅಭಿಮಾನಿಗಳ ಸಂಖ್ಯೆ ಇನ್ ಸ್ಟಾಗ್ರಾಮ್ ನಲ್ಲಿ ಮೂರು ಕೋಟಿ ದಾಟಿದೆ.


ಊರ್ವಶಿ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಟಿಪ್ಪಣಿ ಬರೆದು ವಿಡಿಯೋ ಕೊಲಾಜ್ ಪೋಸ್ಟ್ ಮಾಡಿದ್ದಾರೆ. "ಇನ್ ಸ್ಟಾಗ್ರಾಮ್ ನಲ್ಲಿ ಮೂರು ಕೋಟಿ ಹಿಂಬಾಲಕರಿಗೆ ಕೃತಜ್ಞತೆ. ನನ್ನ ಕಥೆಯ ಪ್ರಮುಖ ಭಾಗವಾಗಿರುವುದಕ್ಕೆ ಧನ್ಯವಾದಗಳು. ನೀವು ಬಂದು ನನ್ನ ಜೀವನವನ್ನು ಸಂತೋಷಪಡಿಸಿದ್ದಕ್ಕಾಗಿ ಧನ್ಯವಾದಗಳು. ನನಗೆ ಪ್ರೀತಿಯನ್ನು ನೀಡಿದ ಮತ್ತು ಪ್ರತಿಯಾಗಿ ನನ್ನ ಪ್ರೀತಿಯನ್ನು ಸ್ವೀಕರಿಸಿದ್ದಕ್ಕಾಗಿ ಕೃತಜ್ಞತೆ. ಸುಂದರವಾದ ನೆನಪುಗಳಿಗೆ ಧನ್ಯವಾದಗಳು, ನಾನು ಅದನ್ನು ಯಾವಾಗಲೂ ಪ್ರಶಂಸಿಸುತ್ತೇನೆ" ಎಂದು ಬರೆದಿದ್ದಾರೆ.

 

ನನ್ನ ಬೆಳೆಸಲು ನೀವು ಭುಜವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಊರ್ವಶಿ ಹೇಳಿದ್ದಾರೆ. ಪ್ರೀತಿ ತೋರಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ತೆಲುಗು ಚಿತ್ರ 'ಬ್ಲ್ಯಾಕ್ ರೋಸ್' ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಊರ್ವಶಿ ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ.

 


ಸುದ್ದಿ ಓದಿ