ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ
ಸಂಬರಗಿ 19 : ಸಂಬರಗಿಯಲ್ಲಿ ಆಗಸ್ಟ್ 21ರಂದು ಗುರುಬಸವ ವಿರಕ್ತ ಮಠದ ಬಾಲಳಿಗಿರಿ ಮಠಾಧ್ಯಕ್ಷ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಾಲಳಿಗಿರಿ ಮಠದ ಸುಪಾಸಿನಿ ಮಹಿಳೆಯರು ಸೇರಿದಂತೆ ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮ.ನಿ.ಪ್ರ. ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.