ರಾಷ್ಟ್ರೀಯ

ಕಾಶ್ಮೀರದಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ: ಶಹನವಾಜ್ ಹುಸೇನ್

ಕಾಶ್ಮೀರದಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ: ಶಹನವಾಜ್ ಹುಸೇನ್

ಕಾಶ್ಮೀರ, ಡಿಸೆಂಬರ್.7: ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಬಲಿಷ್ಠವಾಗುತ್ತಿದೆ ಮತ್ತು ಈ ವಾರ ಹಿಜ್ಬುಲ್ ಮುಜಾಹಿದ್ದೀನ್ ‘ಕಮಾಂಡರ್’ ಅಮೀರ್ ಖಾನ್ ನ ಊರಿನಲ್ಲಿ ರಾಲಿ ಆಯೋಜಿಸಲು ಇದರಿಂದ ಸಾಧ್ಯವಾಯಿತು ಎಂದು ಬಿಜೆಪಿಯ ಹಿರಿಯ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ.

ಹಿಜ್ಬುಲ್ ನ ಎರಡನೇ ಸ್ಥಾನದಲ್ಲಿರುವ ಖಾನ್ ನ ಗ್ರಾಮದಲ್ಲಿ ಒಂದು ದೊಡ್ಡ ರಾಲಿ ಶನಿವಾರ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ನಾವು ನೆಮ್ಮದಿಯ ಭಾವನೆ ಹೊಂದಿದ್ದೇವೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಹುಸೇನ್ ಹೇಳಿದರು.

ಕಣಿವೆಯ ಜಿಲ್ಲಾ ಅಭಿವೃದ್ಧಿ ಮಂಡಳಿಯಲ್ಲಿ (ಡಿಡಿಸಿ) ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ನಾಯಕ ಹುಸೇನ್, ಬಿಜೆಪಿಗೆ ಸಂಬಂಧಿಸಿದಂತೆ, ಡಿಡಿಸಿ ಚುನಾವಣೆಗಳು ಅಭಿವೃದ್ಧಿ, ರಾಜವಂಶ ಮುಕ್ತ ಮತ್ತು ಭ್ರಷ್ಟಾಚಾರ ರಹಿತ ಜಮ್ಮು ಕಾಶ್ಮೀರ ನಿರ್ಮಿಸುವುದಾಗಿದೆ. ಇದಕ್ಕೆ ವಿರುದ್ಧವಾಗಿ, ಗುಪ್ಕಾರ್ ಗ್ಯಾಂಗ್ ಇತರ ಸಮಸ್ಯೆಗಳನ್ನು ಎತ್ತಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

ಕಾಶ್ಮೀರದ ಜನರು " ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಸ್ವೀಕರಿಸುತ್ತಿದ್ದಾರೆ" ಎಂದು ಹುಸೇನ್ ಹೇಳಿದರು.

"ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿರುವುದರಿಂದ" ಬಂದೂಕುಗಳನ್ನು ಬಿಟ್ಟು ಪೆನ್ನು ಕೈಗೆತ್ತಿಕೊಳ್ಳುವಂತೆ ಅವರು ಉಗ್ರರಿಗೆ ಕರೆ ನೀಡಿದರು.

ಹುಸೇನ್ ಈ ವಾರ ದಕ್ಷಿಣ ಕಾಶ್ಮೀರದಲ್ಲಿ ಹಲವಾರು ರೋಡ್ ಶೋಗಳನ್ನು ನಡೆಸಿದ್ದಾರೆ. ಒಂದು ಸಮಯದಲ್ಲಿ ಉಗ್ರಗಾಮಿ ಪೀಡಿತ ಪ್ರದೇಶಗಳಾದ ಗುಫ್ವಾರಾ ಮತ್ತು ವುಲ್ಲರ್ಹಾಮದಲ್ಲಿಯೂ ಹುಸೇನ್  ಚುನಾವಣಾ ಪ್ರಚಾರವನ್ನು ಕೈಗೊಂಡರು.

ಸುದ್ದಿ ಓದಿ