ಚಿಕ್ಕೋಡಿ

ಅಂಕಲಿ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಅಂಕಲಿ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಮಾಂಜರಿ 27: ಚಿಕ್ಕೋಡಿ ತಾಲೂಕಿನ ಅಂಕಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಐದು ವರ್ಷ ಕಾಲದ ಆಡಳಿತ ಮಂಡಳಿಗೆ 12 ಸದಸ್ಯರ ಆವಿರೋಧ ಆಯ್ಕೆ ಜರುಗಿತು. ಇಂದು ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಿರಣ್ ಗಣಪತರಾವ್ ಕೋರೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ್ ಹರಿಶ್ಚಂದ್ರ ಡಂಗ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಸುರೇಶ್ ಕಾಂಬಳೆ ಘೋಷಿಸಿದರು. 

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ  ಶಿವಗೌಡ ಮಲಗೌಡ ಪಾಟೀಲ್ ಗಜಾನನ್ ಭೀಮು ಗುಂಡಕಲ್ಲೆ ಪ್ರವೀಣ್ ರಾಮಚಂದ್ರ ಕಮತೆ ರಾಜು ಮಹಾದೇವ ಬೊಬನಾಳೆ  ಶ್ರೀಮತಿ ಅರ್ಚನಾ ಅಶೋಕ್ ಶೀತೋಳೆ ಸುಗಂಧ ಸುರೇಶ್ ಮಗದುಮ್ ಚನ್ನಗೌಡ ಬಸಗೌಡ ಪಾಟೀಲ್ ಟಕ್ಕಪ್ಪ ಮಲ್ಲಪ್ಪ ಮೇದಾರ್ ಬಾಲಚಂದ್ರ ಯಲ್ಲಪ್ಪ ತಳಕೇರಿ ಸಂತೋಷ್ ಸದಾಶಿವ ಲೋಕರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ತುಕಾರಾಂ ಪಾಟೀಲ್ ತಮ್ಮನ್ನಿ  ಗುಂಡುಕಲಿ ಇನ್ನುಳಿದ ಗ್ರಾಮಸ್ಥರು ಹಾಜರಿದ್ದರು. 

ಕಿರಣ್ ಗಣಪತರಾವ್ ಕೋರೆ  ಮಾತನಾಡಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾಕ್ಟರ್ ಪ್ರಭಾಕರ್ ಕೋರೆ ಹಾಗೂ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಕೋರೆ ಇವರ ಮುಂದಾಳತ್ವದಲ್ಲಿ ಪ್ರಗತಿಗಾಗಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಶ್ರಮಿಸಲಾಗುವುದೆಂದು ಅವರು ಹೇಳಿದರು. ಅದೇ ಪ್ರಕಾರ ರಾಜ್ಯ ಸರ್ಕಾರದಿಂದ ಸದಸ್ಯರಿಗೆ ನೀಡುವ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಅಭಿವೃದ್ಧಿ ಸಾಧಿಸಲಾಗುವುದೆಂದು ಹೇಳಿದರು. 


ಸುದ್ದಿ ಓದಿ