ಅನಗತ್ಯವಾಗಿ ಓಡಾಟ ಮಾಡುವ ವಾಹನ ವಶ
ಚಿಕ್ಕೋಡಿ: ತಾಲೂಕಿನಲ್ಲಿ ಲಾಕಡೌನ ಸಂದರ್ಭದಲ್ಲಿ ಮಾಸ್ಕವಿಲ್ಲದೆ ಬೇಕಾಬಿಟ್ಟಿಯಾಗಿ ವಾಹನಗಳ ಮೇಲೆ ತಿರುಗಾಡುತ್ತಿದ್ದವರ ದ್ವಿಚಕ್ರವಾಹನ -ನಾಲ್ಕುಚಕ್ರದ ವಾಹನ ಸೇರಿ ಈವರೆಗೆ 350 ಕ್ಕೂ ಹೆಚ್ಚು ವಾಹನಗಳ ಸೀಜ್ ಮಾಡಲಾಗಿದೆ ಎಂದು ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ ತಿಳಿಸಿದರು.ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಹಲವು ದಿನಗಳಿಂದ ಕಟ್ಟುನಿಟ್ಟಿನ ಲಾಕಡೌನ ಜಾರಿಯಲ್ಲಿದೆ. ಈ ಲಾಕಡೌನ ಸಂಧರ್ಭದಲ್ಲಿ ಬೇಕಾಬಿಟ್ಟಿಯಾಗಿ ಜನರು ಓಡಾಡಬಾರದು ಎಂಬ ಆದೇಶ ಇದ್ದರೂ ಕೂಡಾ ಇಂತಹ ಲಾಕಡೌನ ನಿಯಮಗಳನ್ನು ಗಾಳಿಗೆ ತೋರಿ, ಮಾಸ್ಕ ವಿಲ್ಲದೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ವಾಹನಗಳ ಮೇಲೆ ತಿರುಗಾಡುತ್ತಿದವರ ಮೇಲೆ ಪೊಲೀಸ್ ಇಲಾಖೆಯು ಶಿಸ್ತಿನ ಕ್ರಮ ಜರುಗಿಸಿದೆ ಎಂದರು.ಈ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ, ಸದಲಗಾ ಹಾಗೂ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ 350 ಕ್ಕೂ ಹೆಚ್ಚು ವಾಹನಗಳ ಸೀಜ್ ಮಾಡಲಾಗಿದೆ. ಎರಡು ದಿನ ಪೂರ್ಣ ಪ್ರಮಾಣದ ಲಾಕಡೌನ್ ಜಾರಿ ಇರುವುದರಿಂದ ಚಿಕ್ಕೋಡಿ ತಾಲೂಕಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ ಜನರು ಮನೆಯಲ್ಲಿದ್ದುಕೊಂಡು ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಸಹಕರಿಸಬೇಕು ಎಂದು ಸಿಪಿಐ ಆರ್.ಆರ್.ಪಾಟೀಲ ಮನವಿ ಮಾಡಿದರು