ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ತಿರುಮಲ, ಅಕ್ಟೋಬರ್ 05: ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಎ ವಿ ಧರ್ಮ ರೆಡ್ಡಿ ಅವರು ದೇವಾಲಯದ ಪ್ರವೇಶದ್ವಾರದ ಬಳಿ ಕೇಂದ್ರ ಸಚಿವರನ್ನು ಬರಮಾಡಿಕೊಂಡರು. ದರ್ಶನದ ನಂತರ ಕೇಂದ್ರ ಸಚಿವರಿಗೆ ವೇದ ಪಂಡಿತರು ವೇದಾಶೀರ್ವಚನ ನೀಡಿದರು.
ದೇವಾಲಯದ ಸಂಕೀರ್ಣದೊಳಗಿನ ರಂಗನಾಯಕುಲ ಮಂಟಪದಲ್ಲಿ ಅವರಿಗೆ 'ತೀರ್ಥ ಪ್ರಸಾದಂ' ಮತ್ತು ವೆಂಕಟೇಶ್ವರನ ಲ್ಯಾಮಿನೇಶನ್ ಫೋಟೋವನ್ನು ನೀಡಲಾಯಿತು. ನಂತರ ಅವರು ನದನೀರಜನಂ ಮಂಟಪದಲ್ಲಿ ಸುಂದರಕಂಡ ಪಥನಂನಲ್ಲಿ ಭಾಗವಹಿಸಿದರು.