ಮರೆಯಲಾಗದ ಮೆಚ್ಚಿನ ನಟ ವಿಷ್ಣು
-ಗುಂಡೇನಟ್ಟಿ ಮಧುಕರ,
ಬೆಳಗಾವಿ ಮೊ: 9448093589
ಸಾಹಸಸಿಂಹ ವಿಷ್ಣುವರ್ಧನ ನಮ್ಮನಗಲಿದ್ದು 30 ಡಿಸೆಂಬರ 2009. ದಿನಗಳು ನಿಲ್ಲುವುದಿಲ್ಲ ಎಷ್ಟು ಬೇಗ ದಶಪೂತರ್ಿಯಾಗಲು ಬಂತು. ಸಂತೋಷವೇ ಇರಲಿ ದುಃಖವೇ ಇರಲಿ ಎಲ್ಲವನ್ನೂ ನುಂಗುತ್ತ ಕಾಲ ನಿಲರ್ಿಪ್ತವಾಗಿ ಮುನ್ನಡೆಯುತ್ತಿರುತ್ತದೆ. ಅದಕ್ಕೆ ವಿಶ್ರಾಂತಿಯೆನ್ನುವುದಿಲ್ಲ. ಆದರೂ ಕಾಲ ನಮ್ಮ ನೆನಪುಗಳನ್ನು ಮಾತ್ರ ನಮ್ಮೊಂದಿಗೆ ಬಿಟ್ಟು ಹೋಗುತ್ತದೆ. ಸರಿಯಾಗಿ ಇಪ್ಪತ್ತು ವರ್ಷಗಳ ಹೀಂದೆ ನಾನು ನಟ ವಿಷ್ಣುವರ್ಧನ ಅವರನ್ನು ಭೇಟಿಯಾಗಿದ್ದೆ. ಅವರಿಗಾಗ ಐವತ್ತು ವರ್ಷ. ಆಗಲೇ ಅವರು ಸಂಪೂರ್ಣವಾಗಿ ಆಧ್ಯತ್ಮಿಕದತ್ತ ವಾಲಿದ್ದು ಅವರ ಮಾತುಗಳಿಂದ ಗೊತ್ತಾಗುತ್ತಿತ್ತು. ಪ್ರತಿಯೊಂದು ವಿಷಯದ ಬಗ್ಗೆ ಹೇಳುವಾಗಲೂ ಪರಮಾತ್ಮನ ಆಶಿವರ್ಾದ ಇದ್ದರೆ ಆಗುತ್ತದೆ. ಎಲ್ಲವೂ ಅವನದ್ದು ನನ್ನೇನೂ ಇಲ್ಲ ಎಂದು ಆಕಾಶದೆಡೆ ಕೈ ಮಾಡಿ ತೋರಿಸುತ್ತಿದ್ದರು. ಸರಳಜೀವಿ ಸ್ನೇಹ ಜೀವಿ ಎಂಬುದು ಅವರೊಂದಿಗೆ ನಾನು ಮಾತನಾಡಿದ ಮಾತುಕತೆಯಿಂದಾಗಿ ನನ್ನ ಮನಸ್ಸಿಗೆನ್ನಿಸಿತು.
ನಾನು ಮೊದಲಿನಿಂದಲೂ ವಿಷ್ಣುವರ್ಧನ ಅವರ ಅಭಿನಯ, ಸಂಭಾಷಣೆಯನ್ನು ಹೇಳುವ ಶೈಲಿ ನನಗೆ ತುಂಬ ಇಷ್ಟ. ಅವರ ಹೆಚ್ಚಿನ ಚಿತ್ರಗಳನ್ನು ನೋಡಿದ್ದೇನೆ. ನಾಗರಹಾವು, ಮುತ್ತಿನ ಹಾರ, ಹಿಮಪಾತ, ಯಜಮಾನ, ರಾಯರು ಬಂದರು ಮಾವನ ಮನೆಗೆ, ಬಂಧನ, ಸುಪ್ರಭಾತಗಳಂತಹ ಮರೆಯಲಾರದಂತಹ ಚಿತ್ರಗಳನ್ನು ಕೊಟ್ಟಿರುವ ಶ್ರೇಯಸ್ಸು ವಿಷ್ಣುವರ್ಧನ ಅವರದ್ದು. ಈ ಅಪರೂಪ ಕಲಾವಿದ ವಿಷ್ಣುವರ್ಧನ ಅವರು ಭೇಟಿಯಾಗುವ ಸದವಕಾಶ ಸಿಕ್ಕದ್ದು ಬೈಲಹೊಂಗಲದಲ್ಲಿ ದೇಶಭಕ್ತಿ ಸಾರುವ ಚಿತ್ರ ವೀರಪ್ಪನಾಯ್ಕ ಚಲನಚಿತ್ರ ಚಿತ್ರಿಕರಣ ಸಂದರ್ಭದಲ್ಲಿ.
ಚಿತ್ರಿಕರಣ ನೋಡಲು ಸಾವಿರಾರು ಜನರು ಸೇರಿದ್ದರು. ವೀರಪ್ಪನಾಯ್ಕ ಚಿತ್ರದ ನಿದರ್ೇಶಕರಾದ ಎಸ್. ನಾರಾಯಣ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ 'ಅವರ ಮನಸ್ಸಿಗೆ ಬೇಸರವಾಗುವಂಥ, ನೋವಾಗುಂಥ ಪ್ರಶ್ನೆಗಳನ್ನು ಕೇಳಬೇಡಿ. ಕಲಾವಿದರ ಮೂಡಾಫ್ ಆದರೆ ನಮ್ಮ ಮುಂದಿನ ಕೆಲಸ ಸರಿಯಾಗೋದಿಲ್ಲ ಎಂದು ವಿನಂತಿಸಿಕೊಂಡರು. ಆವಾಗ್ಯೆ ಚಿತ್ರಿಕರಣದ ವಿರಾಮ ಸಮಯವಾಗಿದ್ದರಿಂದ ಸುಮಾರು ಅರ್ಧಗಂಟೆ ಅವರೊಂದಿಗೆ ಮಾತನಾಡುತ್ತ ಕುಳಿತೆವು.
ವಿಷ್ಣುವರ್ಧನ ಮಾತನಾಡುತ್ತ ಹಲವಾವರು ವಿಷಯಗಳನ್ನು ಹಂಚಿಕೊಂಡರು. ಸಾಕಷ್ಟು ಬದಲಾವಣೆಗಳಿವೆ. ನಮ್ಮ ಪ್ರಯತ್ನಗಳನ್ನು ನಾವು ಮಾಡ್ತಾ ಹೋಗುವುದಷ್ಪೆ, ಹೀಗೇ ಆಗಬೆಕು, ಹಾಗೇ ಮಾಡಬೇಕು ಅಂತ ನಾವೆಲ್ಲ ಮಾಡೊಲ್ಲ. ಏನಾದರೂ ಒಳ್ಳೆಯದನ್ನು ಮಾಡಬೇಕು ಅಂತ ಪ್ರಯತ್ನ ಮಾಡ್ತೀವಿ ಅಷ್ಟೆ. ಒಳ್ಳೆಯದನ್ನು ಮಾಡಬೇಕೆಂದು ಆಸೆ ಪಡ್ತೀವಿ. ಒಳ್ಳೆಯದು ಆಗಬಹುದು, ಆಗದೇ ಇರಬಹುದು. ಮತ್ತೆ ಪ್ರಯತ್ನ ಮಾಡ್ತೀವಿ. ಮೊದಲಿಗಿಂತಲೂ ತಾಂತ್ರಿಕತೆಯಿಂದ ಚಿತ್ರರಂಗ ಸಾಕಷ್ಟು ಮುಂದುವರೆದಿದೆ. ಕಲೆಯಲ್ಲಿ ಕೊನೆಯೆಂಬುದಿಲ್ಲ. ಕಲಿಯುವುದು ಮತ್ತೆ ಕಲಿಯುವುದು ಜೀವನದುಸಿರು. ಇರುವವರೆಗೂ ಕಲಿಯುವುದು ಇದ್ದೇ ಇರುತ್ತದೆ. ಅದಕ್ಕೆ ಕೊನೆಯೆಂಬುದಿಲ್ಲ.
ಚಿತ್ರರಂಗಕ್ಕೆ ಸರಕಾರದ ಸಹಾಯದತ್ತ ನಮ್ಮ ಮಾತು ಹೊರಳದಾಗ ಸರಕಾರ ಕೊಡ್ತಾಯಿರೋ ಸಹಾಯ ತಕ್ಕ ಮಟ್ಟಿಗೆ ಅನುಕೂಲಕರವಾಗಿದೆ. ಯಾವುದೋ ಒಂದು ಸದುದ್ದೇಶ ಇಟ್ಟುಕೊಂಡು ಸರಕಾರದವರು ಸಹಾಯ ಮಾಡ್ತಾಯಿದಾರೆ. ಅದನ್ನು ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸದುಪಯೋಗ ಮಾಡಿಕೊಳ್ಳಬೇಕು. ಬೆಂಕಿ ಕಡ್ಡಿನಾ ಯಾವುದಕ್ಕೂ ಉಪಯೋಗಿಸಿಕೊಳ್ಳಬಹುದು ಅಲ್ವೆ? ದೀಪಾನೂ ಹಚ್ಚಬಹುದು, ಒಂದು ಮನೇನೂ ಸುಟ್ಟು ಹಾಕಬಹುದು. ಆ ತರಹ ಯಾವುದಕ್ಕೆ ಉಪಯೋಗಿಸಿಕೊಳ್ಳಬೇಕೆಂಬ ಒಳ್ಳೆಯ ಧ್ಯೇಯೋದ್ದೇಶಗಳು ನಮ್ಮಲ್ಲಿರಬೇಕು ಅಷ್ಟೆ ಎಂದರು.
ಬೇರೆ ಭಾಷಿಕರು, ಕಲಾವಿದರು ಯಾರೊಂದಿಗೆಯೂ ಸ್ಪಧರ್ೆಗಿಳಿಯದೇ ನಮ್ಮ ಕೆಲಸಗಳನ್ನು ನಾವು ಮಾಡುತ್ತ ಹೋಗಬೇಕು. ಆಗ ಒಂದು ಮಟ್ಟದಲ್ಲಿ ನಮಗೆ ಯಶವೆನ್ನುವುದು ಇದ್ದೇ ಇರುತ್ತದೆ. ಲೋಕೋಭಿನ್ನರುಚಿಃ ಎಂದು ಹೇಳುವ ಹಾಗೆ ಒಬ್ಬರಿಗೆ ಒಂದು ಚಿತ್ರ, ಒಬ್ಬರ ಅಭಿನಯ ಇಷ್ಟವಾದರೆ ಬೇರೆಯವರಿಗೆ ಅದು ಇಷ್ಟವಾಗದೇ ಹೋಗಬಹುದು. ನಮ್ಮ ಕೈಲಾದಷ್ಟು ಪ್ರಾಮಾಣಿಕವಾಗ ಜನರಿಗೆ ಒಳ್ಳೆಯದನ್ನು ಕೊಡುತ್ತ ಹೋಗುವುದಷ್ಟೇ ನಮ್ಮ ಕೆಲಸವೆಂದರು.
ನನ್ನ ವೃತ್ತಿ ನನಗೆ ತುಂಬ ಖುಷಿಯನ್ನು ಕೊಟ್ಟಿದೆ. ಕನರ್ಾಟಕ ಜನತೆ ನನ್ನನ್ನು ಪ್ರೀತಿಯಿಂದ ಎತ್ತಿ ಹಿಡಿದಿದ್ದಾರೆ. ನನ್ನ ಕಲೆಯನ್ನು ಮೆಚ್ಚಿಕೊಂಡು ಮುದ್ದಾಡುತ್ತಾರೆ ಇದಕ್ಕಿಂತ ಹೆಚ್ಚಿಗೆ ನನಗೇನೂ ಬೇಕಾಗಿಲ್ಲ. ಉತ್ತರ ಕನರ್ಾಟಕದ ಬೀದರ, ಬೀಜಾಪುರ, ಬಳ್ಳಾರಿ, ಬಾದಾಮಿ, ಬೆಳಗಾವಿ ಎಲ್ಲಡೆ ಚಿತ್ರಿಕರಣಗೊಂಡಿವೆ. ಉತ್ತರ ಕನರ್ಾಟಕ ಜನರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಅವರ ಕುರತು ನನ್ನಲ್ಲಿ ಗೌರವವಿದೆ. ಒಟ್ಟಿನಲ್ಲಿ ಅಭಿಮಾನಿಗಳೆಂದರೇನೇ ಜೀವನದುಸಿರು ಇದ್ದಹಾಗೆ. ಅವರಿಲ್ಲದ ಬದುಕು ಅಸಾಧ್ಯವೆಂದರು.
ಉತ್ತರ ಕನರ್ಾಟಕ ಜನತೆ ನಿಮ್ಮನ್ನು ವೀರ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ನೋಡಲು ಇಚ್ಛೆ ಪಡುತ್ತಾರೆ. (ಆವಾಗ್ಯೆ ನಟ ದರ್ಶನ ಅಭಿನಯದ ವೀರ ಸಂಗೊಳ್ಳಿ ರಾಯಣ್ಣ ಬಂದಿರಲಿಲ್ಲ) ಎಂಬ ಮಾತಿಗೆ ವಿಷ್ಣುವರ್ಧನ ಅವರ ಉತ್ತರ ತುಂಬ ಮಾಮರ್ಿಕವಾಗಿತ್ತು. ನೋಡೋಣ, ಪ್ರತಿಯೊಂದೂ ಆ ಪರಮಾತ್ಮ ಮಾಡಿಸೋನು, ನನ್ನದೇನೂ ಇಲ್ಲ. ಹಿಂದೆಯೂ ಇಲ್ಲ, ಮುಂದೆಯೂ ಇರೋದಿಲ್ಲ. ಅವನು ಏನು ಹೇಳ್ತಾನೋ ಅದ್ನ ಮಾಡೋದು. ಮಾಡಿಸೋದೆಲ್ಲ ಅವ್ನು, ಅವನು ಹೇಳಿದ್ಹಾಗೆ ನಾವು ಮಾಡೋದು. ಅವಕಾಶ ದೈವೇಚ್ಛೆ ಇದ್ರೆ ಆಗಬಹುದು. ಪರಮಾತ್ಮ 'ಹ್ಞು' ಅಂದ್ರೆ ಏನ ಬೇಕಾದ್ರೂ ಆಗಬಹುದು ಎಂದು ಆಕಾಶದೆಡೆ ಕೈ ಮಾಡಿ ಹೇಳಿದರು. ಬಹುಷಃ ಭಗವಂತಗದು ಬರಲಿಲ್ಲ ಅದು ನೆರವೇರಲಿಲ್ಲ.
ಕಲಾತ್ಮಕ ಚಿತ್ರ ಹಾಗೂ ವಾಣಜ್ಯ ಚಿತ್ರಗಳ ಕುರಿತು ಕೇಳಿಗಾಗ ವಿಷ್ಣುವರ್ಧನ ಅವರು ಯಾವ ಚಿತ್ರಗಳಲ್ಲಿ ಕಲೆಯಿಲ್ಲ? ಎಲ್ಲ ಚಿತ್ರಗಳಲ್ಲೂ ಕಲೆಯಿದೆ. ವಾಣಿಜ್ಯ ಚಿತ್ರಗಳು, ಕಲಾತ್ಮಕ ಚಿತ್ರಗಳೆಂದು ವಿಂಗಡಿಸಿದವರ್ಯಾರು? ಚಿತ್ರ ಬಿಡುಗಡೆಗೊಂಡು ಅದು ಸಾಕಷ್ಟು ದುಡ್ಡು ಮಾಡಿದಾಗ ಅದು ವಾಣಿಜ್ಯ ಚಿತ್ರ, ದುಡ್ಡು ಮಾಡದೇ ಹೋದ್ರೆ ಅದು ಕಲಾತ್ಮಕ ಚಿತ್ರ; ಇಷ್ಟೆ ನನಗೆ ಗೊತ್ತು. 'ವಂಶವೃಕ್ಷ ಕಲಾತ್ಮಕ ಚಿತ್ರ ನ್ಯಾಷನಲ್ ಅವಾರ್ಡ ಬಂತು ಇದು ಕಲಾತ್ಮಕ ಚಿತ್ರವೆಂದು ನೀವು ಅನ್ನೋದಾದರೆ 'ನಾಗರಹಾವು' ಅದಕ್ಕೂ ನ್ಯಾಷನಲ್ ಅವಾರ್ಡ ಬಂತು. ಹಾಗಾದರೆ ಅದು ವಾಣಿಜ್ಯಾನಾ, ಕಲಾತ್ಮಕನಾ? ಎಂದು ಪ್ರಶ್ನಿಸಿದ ಅವರು ನನಗಂತೂ ವ್ಯತ್ಯಾಸವೇ ಕಂಡು ಬರೋದಿಲ್ಲ. ಚಿತ್ರ ಚೆನ್ನಾಗಿದ್ರೆ ನೋಡತಾರೆ, ಇಲ್ದಿದ್ರೆ ನೋಡೋಲ್ಲ ಅಷ್ಟೆ. ಎಲ್ಲ ಚಿತ್ರಗಳಲ್ಲೂ ಕಲಾವಿದರಿರ್ತಾರೆ, ಕಲೆ ಇರ್ತದೆ ಅಂತಾ ನಾ ತಿಳ್ಕೊಂಡಿದ್ದೀನಿ ಎಂದು ಹೇಳಿದರು.
ಮುಂದೆ ನಮ್ಮ ಮಾತು ವಿಷ್ಣುವರ್ಧನ ಅವರು ಕಂಡ ಚಿತ್ರರಂಗದ ಏಳು ಬೀಳುತಳತ್ತ ಹೊರಳಿತ್ತು ಅದಕ್ಕೆ ಅವರು- ಮನುಷ್ಯನ ಜೀವನದಲ್ಲಿ ಏಳುಬೀಳುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಏಳುಬೀಳುಗಳೇ ಮನುಷ್ಯಲ್ಲಿ ಪೂರ್ಣತೆಯನ್ನು ತಂದುಕೊಡುತ್ತವೆಂದು ಹೇಳಬಹುದು. ಇವೆಲ್ಲವೂ ಜೀವನದಲ್ಲಿ ಬೇಕೇಬೇಕು. ಉಳಿಪೆಟ್ಟು ಬೀಳದೇ ಮೂತರ್ಿಯಾಗಲಾರದು. ಬಾಳಿನಲ್ಲಿ ಪಕ್ವತೆ ಕಾಣಬೇಕಾದರೆ ಇವೆಲ್ಲವುಗಳಿಂದ ದಾಟಿ ಬರುವುದು ಅನಿವಾರ್ಯ ಎಂದು ತುಂಬ ಅರ್ಥಪೂರ್ಣ ಮಾತು ಹೇಳಿದರು.
ಯಾವಾಗಲೂ ವಿಷ್ಣುವರ್ಧನ ಅವರ ಕೈಯಲ್ಲೊಂದು ಕಡಗವಿರುದನ್ನು ನಾನು ಗಮನಿಸಿದ್ದೆ. ಆ ಕುರಿತಂತೆ ಕುತುಹಲದಿಂದ ಈ ಕಡಗ ನಿಮ್ಮ ಕೈ ಸೇರಿದ ಹಿನ್ನಲೆಯೇನು ಎಂದು ಕೇಳಿದೊಡನೆ. 1980ರಲ್ಲಿ ಗುರುದ್ವಾರದಲ್ಲಿ ನನ್ನ ಗುರುಗಳೊಬ್ಬರು ಈ ಕಡಗವನ್ನಿರಿಸಿದ್ದಾರೆ. ಇದೊಂದು ವಿಶೇಷವಾದಂತಹ ಕಡಗ. ಇದರಿಂದ ನಿಮ್ಮ ಶ್ರೇಯೋಭಿಲಾಶೆಗಳೆಲ್ಲ ಈಡೇರುತ್ತವೆ. ಯಾವುದೇ ಕಾರಣಕ್ಕೂ ಈ ಕಡಗವನ್ನು ನಿಮ್ಮ ಕೈಯಿಂದ ತೆಗೆಯಕೂಡದು, ಇದು ನಿಮ್ಮೊಂದಿಗೆ ಇರಬೇಕು., ನಿಮ್ಮೊಂದಿಗೇ ಹೋಗಬೇಕೆಂದಿದ್ದಾರೆ. ಗುರುಗಳ ಮಾತಿನಂತೆ ಈ ಕಡಗ ಯಾವಾಗಲೂ ನನ್ನೊಂದಿಗೆ ಇರುತ್ತದೆ. ಪಂಜಾಬದ ಸ್ನೇಹಿತರು ಯಾವಾಗಲಾದರೂ ಸಿಕ್ಕಾಗ 'ಈ ವಿಶೇಷವಾದಂತಹ ಕಡಗ ನಿಮಗೆಲ್ಲಿ ಸಿಕ್ಕಿತು!' ಎಂದು ಅಚ್ಚರಿಯಿಂದ ಕೇಳುತ್ತಾರೆ ಎಂದು ಹೇಳಿದರು.
ಅಪರೂಪ ವ್ಯಕ್ತಿತ್ವದ ಸಹಜ ನಟನೆಯ ನಟ ವಿಷ್ಣುವರ್ಧನ ಈಗ ನೆನಪು ಮಾತ್ರ!