ರಾಣೆಬೆನ್ನೂರ

ಅಧ್ಯಕ್ಷ -ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅಧ್ಯಕ್ಷ -ಉಪಾಧ್ಯಕ್ಷರ ಅವಿರೋಧ ಆಯ್ಕೆ

ರಾಣೆಬೆನ್ನೂರು 22: ವಿಶ್ವಕರ್ಮ ಹತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಚುನಾವಣೆ ಪ್ರಕ್ರಿಯೆ ರವಿವಾರ ನಡೆಯಿತು. ಐದು ವರ್ಷಗಳ ಅವಧಿಗಾಗಿ ನಡೆದ  ಚುನಾವಣೆಯನ್ನು ರಿಟನರ್ಿಂಗ್ ಆಫೀಸರ್,ಎಂ ಯು. ಸೋಮಣ್ಣನವರ ಅವರು ಕಾರ್ಯನಿರ್ವಹಿಸಿದರು.ಅಧ್ಯಕ್ಷರಾಗಿ ಮಾರ್ತಾಡಪ್ಪ ನೀಲಕಂಠಪ್ಪ ಕಮ್ಮಾರ ಹಾಗೂ ಉಪಾಧ್ಯಕ್ಷರಾಗಿ ಫಕೀರೇಶ ವೀರಪ್ಪ ಬಡಿಗೇರ ಆಯ್ಕೆಯಾದರು. 

    ಇನ್ನುಳಿದಂತೆ ದತ್ತಾತ್ರೇಯ ದಾಮೋದರ ಬಡಿಗೇರ, ಹೇಮಾಚಾರಿ ಮಹಾರುದ್ರಪ್ಪ ಬಡಿಗೇರ, ಕೃಷ್ಣ ಭಗವಂತಪ್ಪ ಕಮ್ಮಾರ, ಮೌನೇಶಪ್ಪ ಬ್ರ ಮನ್ವಾಚಾರಿ, ಓಂಕಾರಪ್ಪ ಪೂರ್ವಾಚಾರಿ ಅರ್ಕಾಚಾರಿ, ಮೌನೇಶ್ ನೀಲಕಂಠಾಚಾರಿ ಮಾಯಾಚಾರಿ, ವೀರಾಚಾರಿ ಮೌನೇಶಪ್ಪ ಬಡಿಗೇರ, ಸರ್ವಕ್ಕ ಖಂಡಾಚಾರಿ ಬಡಿಗೇರ, ಮಮತಾ ಮಂಜುನಾಥ  ಶಿಕಾರಿಪುರ ಇವರುಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ರಿಟನರ್ಿಂಗ್ ಅಧಿಕಾರಿಗಳು ತಿಳಿಸಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರು ಪದಾಧಿಕಾರಿಗಳಿಗೆ ಅನೇಕ ಸಂಘ ಸಂಸ್ಥೆಗಳು ಸಹಕಾರಿ ಬಂಧುಗಳು ಹಾರ್ದಿ ಕವಾಗಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ