ರಾಷ್ಟ್ರೀಯ

ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ

ಏಮ್ಸ್  ಆಸ್ಪತ್ರೆಗೆ  ದಾಖಲಾಗಿರುವ ಉಮಾ ಭಾರತಿ

ಹೃಷಿಕೇಶ್, ಸೆಪ್ಟೆಂಬರ್ 29: ಕೊರೊನಾ ಸೋಂಕಿನಿಂದ  ಬಳಲುತ್ತಿರುವ  ಕೇಂದ್ರ ಮಾಜಿ ಸಚಿವೆ , ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ   ಆಸ್ಪತ್ರೆಗೆ ದಾಖಲಾಗಿದ್ದಾರೆ.  ಜ್ವರ ತೀವ್ರಗೊಂಡ ಕಾರಣ  ಹೃಷಿಕೇಶದ  ಏಮ್ಸ್  ಆಸ್ಪತ್ರೆಗೆ ದಾಖಲಾಗಿರುವುದಾಗಿ   ಸೋಮವಾರ  ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.  ವೈದ್ಯರು ಅನುಮತಿ ನೀಡಿದರೆ  ಬುಧವಾರ   ನಡೆಯಲಿರುವ  ಬಾಬ್ರಿ ಮಸೀದಿ  ದ್ವಂಸ ಪ್ರಕರಣದಲ್ಲಿ  ಸಿಬಿಐ  ವಿಶೇಷ  ನ್ಯಾಯಾಲಯದ  ಮುಂದೆ ಹಾಜರಾಗುವುದಾಗಿ  ತಿಳಿಸಿದ್ದಾರೆ.

ಕೇಂದ್ರ  ಆರೋಗ್ಯ  ಸಚಿವ ಡಾ. ಹರ್ಷ ವರ್ಧನ್ ತಮ್ಮ  ಆರೋಗ್ಯದ ಬಗ್ಗೆ   ತೀವ್ರ   ಕಾಳಜಿ ವಹಿಸುತ್ತಿದ್ದಾರೆ ಎಂದು ಉಮಾ ಭಾರತಿ  ಹೇಳಿದ್ದಾರೆ. ಭಾನುವಾರ  ರಾತ್ರಿ   ಜ್ವರ  ತೀವ್ರಗೊಂಡ ಕಾರಣ   ತಮ್ಮ  ಸ್ನೇಹಿತರು   ತೀವ್ರ ಕಳವಳಗೊಂಡು, ಏಮ್ಸ್ ದಾಖಲುಗೊಳ್ಳುವಂತೆ  ಸೂಚಿಸಿದರು.   ವೈದ್ಯರು ಅನುಮತಿ  ನೀಡಿದರೆ  ಬಾಬ್ರಿ ಮಸೀದಿ ಪ್ರಕರಣ   ನ್ಯಾಯಾಲಯದ  ವಿಚಾರಣೆಗೆ  ಹಾಜರಾಗುವೆ ಎಂದು ಉಮಾ ಭಾರತಿ  ಹೇಳಿದ್ದಾರೆ. 

ಹಿಮಾಲಯದಲ್ಲಿ  ನೆಲೆಸಿರುವ ಸಾಧುಗಳ ಭೇಟಿಯಿಂದ  ತಮಗೆ ಕೊರೊನಾ ಸೋಂಕು  ತಗುಲಿದೆ ಎಂದು ಹಬ್ಬಿರುವ ಸುದ್ದಿಗಳನ್ನು ಅವರು ಖಂಡಿಸಿದರು.  ದೆಹಲಿಗೆ ಸೇರಿದ  ತಮ್ಮ ಕಾರು ಚಾಲಕನಿಗೂ ಕೊರೊನಾ ಪಾಸಿಟಿವ್  ನಿರ್ಧಾರಣೆಯಾಗಿದೆ. ನಂತರ  ನಡೆಸಿದ  ಪರೀಕ್ಷೆಯಲ್ಲಿ ತಮಗೂ  ಕೊರೊನಾ  ಇರುವುದು  ದೃಢಪಟ್ಟಿದೆ. ವೈರಸ್  ಸೋಂಕು ತಗುಲಿರುವ ವಿಷಯ    ಮೊದಲು ಚಾಲಕನಿಗೆ ಗೊತ್ತಿರಲಿಲ್ಲ ಎಂದು  ಉಮಾ ಭಾರತಿ ವಿವರಿಸಿದ್ದಾರೆ.

ಸುದ್ದಿ ಓದಿ